Slide
Slide
Slide
previous arrow
next arrow

ಸ್ವಾತಂತ್ರ್ಯ ದಿನಾಚರಣೆ: ವಿಶೇಷ ಅತಿಥಿಗಳಾಗಿ ಬಾಳಿಗಾ ಕಾಲೇಜಿನ ವಿದ್ಯಾರ್ಥಿಗಳು ದೆಹಲಿಗೆ

300x250 AD

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ಹಾಗೂ ಎನ್.ಎಸ್.ಎಸ್. ಸ್ವಯಂಸೇವಕರಾದ ಕುಮಾರ. ಪಿ. ಎಸ್. ಶಿವರಾಜ, ಕುಮಾರಿ. ನಮೃತಾ ಪಟಗಾರ ಇವರು 10 ದಿನಗಳ ಕಾಲದ ಪೋಲಿಸ್ ನಿಕಟಪೂರ್ವ ತರಬೇತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ MY Bharat Portal Govt. of India Delhi ಇವರ ಆಹ್ವಾನದ ಮೇರೆಗೆ ದೆಹಲಿಯಲ್ಲಿ ನಡೆಯುವ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರುಗಳ ಜೊತೆಯಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳು ಆದ ಶ್ರೀಮತಿ. ರೇಖಾ ಸಿ. ಯೆಲಿಗಾರ ಕೂಡ ಪಾಲ್ಗೊಳ್ಳಲಿದ್ದಾರೆ. ಇವರನ್ನು ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ್, ಕೆನರಾ ಕಾಲೇಜ್ ಸೊಸೈಟಿಯ ಅಧ್ಯಕ್ಷರಾದ ರಾಮಚಂದ್ರ ಆರ್. ಕಾಮತ್, ಉಪಾಧ್ಯಕ್ಷರಾದ ದಿನಕರ ಎಂ. ಕಾಮತ, ಕಾರ್ಯಾಧ್ಯಕ್ಷರಾದ ಹನುಮಂತ. ಕೆ. ಶಾನಭಾಗ, ಕಾರ್ಯದರ್ಶಿಗಳಾದ ಯಶವಂತ ವಿ. ಶಾನಭಾಗ ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಹಾಗೂ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top