ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ದಿಗ್ಗಜ ಕಲಾವಿದರಿಂದ ಪೌರಾಣಿಕ ಆಖ್ಯಾನ ಶ್ರೀಕೃಷ್ಣ ಸಂಧಾನ ಆಖ್ಯಾನ ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿಯಾಯಿತು.
ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆ ಅವರ ಭಾಗವತಿಕೆಯಲ್ಲಿ ಸುರುಳಿ ಬಿಚ್ಚಿಕೊಂಡ ಯಕ್ಷಗಾನದಲ್ಲಿ ಮದ್ದಲೆವಾದಕರಾಗಿ ಶಂಕರ ಭಾಗವತ, ಅನಿರುದ್ಧ ಹೆಗಡೆ, ಚಂಡೆಯಲ್ಲಿ ಗಣೇಶ ಗಾಂವಕರ. ಇದ್ದರು.
ಹಿರಿಯ ಕಲಾವಿದರಾದ ಬಳಕೂರು ಕೃಷ್ಣ ಯಾಜಿ ವಿದುರನಾಗಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಶ್ರೀಕೃಷ್ಣನಾಗಿ, ಕೆ.ಜಿ.ಮಂಜುನಾಥ ಕೌರವನಾಗಿ, ಧರ್ಮರಾಯನಾಗಿ ಅಶೋಕ ಭಟ್ ಸಿದ್ದಾಪುರ, ಪಾಂಚಾಲಿಯಾಗಿ ನೀಲಕೋಡ ಶಂಕರ ಹೆಗಡೆ, ಭೀಮನಾಗಿ ನಿರಂಜನ ಜಾನಗಳ್ಳಿ, ಕರ್ಣನಾಗಿ ವೆಂಕಟೇಶ ಬೊಗ್ರಿಮಕ್ಕಿ, ದೂತನಾಗಿ ನಾಗರಾಜ ಉಮ್ಮಚಗಿ, ದುಶ್ಯಾಸನನಾಗಿ ದರ್ಶನ್, ಆಸ್ಥಾನ ನರ್ತಕಿಯರಾಗಿ ಕು. ಪ್ರೀತಿ, ಕು.. ಇಳಾ ಭಾಗವಹಿಸಿದ್ದರು. ದತ್ತು ಭಟ್ಟ ಸೋಮಸಾಗರ ಸಂಯೋಜಿಸಿದ್ದರು. ಸತೀಶ ಹೆಗಡೆ ಸಾಮ್ರಾಟ್ ವಂದಿಸಿದರು.