Slide
Slide
Slide
previous arrow
next arrow

ರಾಜ್ಯ ಮಟ್ಟದ ಸ್ಕೇಟರ್ಸ್ ತಂಡಕ್ಕೆ ದಾಂಡೇಲಿಯ ಸಾನಿಕಾ ಆಯ್ಕೆ

300x250 AD

ದಾಂಡೇಲಿ : ರಾಜ್ಯಮಟ್ಟದ ಬಾಲಕಿಯರ ಹಿರಿಯರ ವಿಭಾಗದ ಸ್ಕೇಟರ್ಸ್ ತಂಡಕ್ಕೆ ನಗರದ ಪ್ರತಿಭಾನ್ವಿತ ಕ್ರೀಡಾಪಟು ಸಾನಿಕಾ ಉಮೇಶ ತೋರಾಥ್ ಆಯ್ಕೆಯಾಗಿ ನಗರಕ್ಕೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ.

ಸತತವಾಗಿ ಕಳೆದ ಎರಡು ವರ್ಷಗಳಲ್ಲಿ ಸಾನಿಕಾ ಉಮೇಶ ತೋರಾಥ್ ರಾಜ್ಯಮಟ್ಟದ ಬಾಲಕಿಯರ ಕಿರಿಯ ವಿಭಾಗದ ತಂಡಕ್ಕೆ ಆಯ್ಕೆಯಾಗಿ ಗಮನಾರ್ಹ ಪ್ರದರ್ಶನ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇವಳು ನಗರದ ನಿವಾಸಿ ಹಾಗೂ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ನೌಕರರಾಗಿರುವ ಉಮೇಶ ತೋರಾಥ್ ಅವರ ಸುಪುತ್ರಿಯಾಗಿದ್ದಾಳೆ. 

300x250 AD

ಆ.7 ರಿಂದ 11 ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾನಿಕಾ ಉಮೇಶ ಥೋರಾತ್ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಇದೀಗ ರಾಜ್ಯಮಟ್ಟದ ಬಾಲಕಿಯರ ಹಿರಿಯರ ತಂಡಕ್ಕೆ ಆಯ್ಕೆಯಾಗಿ ಎಲ್ಲರ ಗಮನ ಸೆಳೆದಿರುವ ಸಾನಿಕಾ ಉಮೇಶ ತೋರಾಥ್ ಇವಳ ಸಾಧನೆಗೆ ನಗರದ ಗಣ್ಯರನೇಕರು ಹರ್ಷವನ್ನು ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top