Slide
Slide
Slide
previous arrow
next arrow

ದೇಶಭಕ್ತಿ ಗೀತಗಾಯನ ಸ್ಪರ್ಧೆ: ಲಯನ್ಸ್ ಸ್ಕೌಟ್ಸ್ ತಂಡ ಜಿಲ್ಲಾಮಟ್ಟಕ್ಕೆ

300x250 AD

ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಶಿರಸಿ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಲಯನ್ಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ವಿ.ಗಣೇಶ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಶಶಾಂಕ್ ಹೆಗಡೆ ಸಾಂಕೇತಿಕವಾಗಿ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಕೋರಿದರು.

ಶಿರಸಿ ತಾಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮಧ್ಯಾಹ್ನ ನಡೆದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಲಯನ್ ಅಶ್ವತ್ ಹೆಗಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮುಖ್ಯ ಆಯುಕ್ತರಾದ ವಿ.ಹೆಚ್ ಭಟ್ಕಳ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾದ ರಾಯ್ಸದ್,ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಶಶಾಂಕ್ ಹೆಗಡೆ, ಕಾರ್ಯದರ್ಶಿ ಎನ್.ಎಸ್.ಭಾಗ್ವತ್, ಎ.ಎಸ್.ಓ.ಸಿ. ವೀರೇಶ್ ಮಾದರ್ ನಿರ್ಣಾಯಕರುಗಳಾದ ಶ್ರೀಮತಿ ಗೀತಾ ಹೆಗಡೆ ಮುಂಡ್ಗೇಸರ, ಉಮಾಕಾಂತ್ ಹೆಗಡೆ, ನರಹರಿ ಭಂಡಾರ್ಕರ್  ಉಪಸ್ಥಿತರಿದ್ದರು. 

 ಸ್ಕೌಟ್ಸ್ ವಿಭಾಗದಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ ಸ್ಥಾನ, ಶ್ರೀನಿಕೇತನ ಸ್ಕೂಲ್ ಇಸಳೂರು ದ್ವಿತೀಯ ಸ್ಥಾನ, ಸ.ಹಿ.ಪ್ರಾ.ಶಾಲೆ ಯಡಳ್ಳಿ ತೃತೀಯ ಸ್ಥಾನ ಹಾಗೂ ಸ ಹಿ ಪ್ರಾ ಶಾಲೆ ಮಾರಿಗುಡಿ ಸಮಾಧಾನಕರ ಸ್ಥಾನ ಗಳಿಸಿದವು.

 ಗೈಡ್ಸ್ ವಿಭಾಗದಲ್ಲಿ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆ ನರೇಬೈಲ್ ಪ್ರಥಮ ಸ್ಥಾನ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನ, ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ತೃತೀಯ ಸ್ಥಾನ ಹಾಗೂ ಶ್ರೀನಿಕೇತನ ಸ್ಕೂಲ್ ಇಸಳೂರು ಮತ್ತು  ಸ.ಹಿ ಪ್ರಾ.ಶಾಲೆ ಯಡಳ್ಳಿ  ತಂಡಗಳು ಸಮಾಧಾನಕರ ಸ್ಥಾನ ಗಳಿಸಿದವು.

300x250 AD

 ಲಯನ್ಸ್ ಕ್ಲಬ್ ಶಿರಸಿಯ ಅಧ್ಯಕ್ಷರಾದ ಲಯನ್ ಅಶ್ವಥ್ ಹೆಗಡೆ, ಕಾರ್ಯದರ್ಶಿ ಲಯನ್ ವಿನಾಯಕ ಭಾಗ್ವತ್, ಖಜಾಂಚಿ ಲಯನ್ ವೇಣುಗೋಪಾಲ್ ಹೆಗಡೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಭಾಗವಹಿಸಿದ್ದ ಎಲ್ಲ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಗೆ  ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಲಯನ್ ಅಶೋಕ್ ಹೆಗಡೆ ಸ್ಮರಣಿಕೆ ನೀಡಿದರು.

 ಅತಿವೃಷ್ಟಿಯಿಂದಾಗಿ ಇತ್ತೀಚೆಗೆ ಮಡಿದವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು  ಲಯನ್ಸ್ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳಾದ ಎಸ್. ಕೆ.ಶ್ರಾವ್ಯ ಸ್ವಾಗತಿಸಿದರು. ಚಿನ್ಮಯ್ ಕೆರೆಗದ್ದೆ ವಂದಿಸಿದರು.  ಸಮೀಕ್ಷಾ ರಾಯ್ಕರ್ ನಿರೂಪಿಸಿದರು. ಲಯನ್ಸ ಪ್ರೌಢಶಾಲೆಯ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರ್ ಹಾಗೂ ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ  ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿದ್ದರು.

Share This
300x250 AD
300x250 AD
300x250 AD
Back to top