ಶಿರಸಿ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಯಶಸ್ವಿಯಾಗಿ ತನ್ನನ್ನು ತೊಡಗಿಸಿಕೊಂಡಿರುವ, ಇನ್ನರ್‌ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಸಂಘಟನೆಯು, ಸಂಪಖಂಡದ ಗಜಾನನ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ, ಬೊಮ್ಮಿ ಗವಾಲಿಯ ಒಂದು ವರ್ಷದ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಂಡಿದೆ.
ಆ.2,ಶುಕ್ರವಾರದಂದು ಸಂಪಖಂಡದ ಶ್ರೀ ಗಜಾನನ ಹೈಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಿರಸಿ ಇನ್ನರವೀಲ್ ಅಧ್ಯಕ್ಷೆ, ಶ್ರೀಮತಿ ರೇಖಾ ಅನಂತ್ ರೂ.25,000 ಚೆಕ್ ಅನ್ನು ಹೈಸ್ಕೂಲ್ ಕಮಿಟಿ ಅಧ್ಯಕ್ಷರಾದ ಡಾ.ದಿನೇಶ್ ಹೆಗಡೆಯವರಿಗೆ ಹಸ್ತಾಂತರಿಸಿದರು.
ಈ ಮೊತ್ತವನ್ನು ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ, ಶ್ರೀಮತಿ ಮಾಧುರಿ ಶಿವರಾಂ ದೇಣಿಗೆಯಾಗಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ, ಹೈಸ್ಕೂಲ್ ಮಕ್ಕಳಿಗೆ, ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ, ನಿರ್ವಹಣೆ ಮತ್ತು ತಡೆಗಟ್ಟುವಿಕಾ ಕ್ರಮಗಳ ಬಗ್ಗೆ ಡಾ.ದಿನೇಶ್ ಹೆಗಡೆ ಉಪನ್ಯಾಸ ನೀಡಿದರು. ಶಾಲೆಯ ಮುಖ್ಯಾಧ್ಯಾಪಕರಾದ ಜಿ.ಎನ್.ಹೆಗಡೆ ಮತ್ತು ಸತೀಶ್ ಭಟ್, ಪ್ರಾಯೋಜಕಿ ರೊ.ಮಾಧುರಿ ಶಿವರಾಂ, ಲಿಟರಸಿ ಕೊ ಆರ್ಡಿನೇಟರ್ ಶ್ರೀಮತಿ ಕಿರಣ್ ಹಬೀಬ್, ಕಾರ್ಯದರ್ಶಿ ಪೂರ್ಣಿಮಾ ಅರವಿಂದ್ ವೇದಿಕೆಯಲ್ಲಿದ್ದರು.
ಡಾ.ದಿನೇಶ್ ಹೆಗಡೆ ಸ್ವಾಗತಿಸಿದರೆ, ರೊ.ಮಾಧುರಿ ಶಿವರಾಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಾಯರಾದ ರಮೇಶ್ ಹೊಳೆಣ್ಣನವರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಇನ್ನರ್ ವೀಲ್‌ನ ಸಹನಾ ಜೋಶಿ, ಪೂರ್ಣಿಮಾ ಹೆಗಡೆ ಬೆಳ್ಳೇಕೇರಿ,ಸುನಂದಾ ಹೆಗಡೆ,ವಿಜಯಲಕ್ಷ್ಮೀ ಹೆಗಡೆ, ಪುಷ್ಪಾ ಭಟ್, ಸುನಂದಾ ಶ್ರೀಪತಿ ಹೆಗಡೆ, ಉಪಸ್ಥಿತರಿದ್ದರು.