Slide
Slide
Slide
previous arrow
next arrow

ಸ್ಪೀಡ್ ರೈಡರ್ಸ್‌ಗೆ ದುಸ್ವಪ್ನವಾಗಲಿರುವ ರಾಡರ್ ಗನ್: ದಾಂಡೇಲಿಯಲ್ಲಿ ಪ್ರಾಯೋಗಿಕ ಪರೀಕ್ಷೆ

300x250 AD

ದಾಂಡೇಲಿ : ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಡನ್ ಗನ್ ಕಾರ್ಯಾಚರಣೆಯನ್ನು ನಡೆಸಲು ದಾಂಡೇಲಿಯ ಪೊಲೀಸರು ಇದೀಗ ಮುಂದಾಗಿದ್ದಾರೆ.

ರಾಜ್ಯದ ಯಾವುದೇ ರಸ್ತೆಯಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಎಡಿಜಿಪಿ ಅಲೋಕ್ ಕುಮಾರ್ ಸೂಚನೆಯನ್ವಯ ದಾಂಡೇಲಿ ನಗರದಲ್ಲಿಯೂ ಆ.1ರಿಂದ ರಾಡರ್ ಗನ್ ಕಾರ್ಯಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳವಾರ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಜಗದೀಶ್ ನಾಯಕ ರಾಡರ್ ಗನ್ ಇದರ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ.

ಆ.1ರಿಂದ ರಾಡರ್ ಗನ್ ಕಾರ್ಯಾಚರಣೆ ನಡೆಯಲಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಾರಿಗೆ ನಿಯಮಾವಳಿಗಳನ್ನು ಪಾಲಿಸಿ ವಾಹನಗಳನ್ನು ಚಲಾಯಿಸಬೇಕಾಗಿದೆ. ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವ ಸವಾರರನ್ನು ನಿಯಂತ್ರಿಸಲು ಇದು ಅತ್ಯುತ್ತಮವಾದ ವ್ಯವಸ್ಥೆಯಾಗಿದ್ದು ಈ ಅಪರಾಧಕ್ಕೆ 2000 ವರೆಗೆ ದಂಡ ಆಕರಣೆ ಅಥವಾ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

300x250 AD

ವಾಹನ ಸವಾರರೇ, ಸಂಚಾರಿ ನಿಯಮಗಳನ್ನು ಪಾಲಿಸಿ ನಿಮ್ಮ ನಿಮ್ಮ ಜೀವವನ್ನು ಉಳಿಸಿ ಎಂದು ಪಿಎಸ್ಐ ಜಗದೀಶ್ ನಾಯಕ ಮನವಿ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top