ದಾಂಡೇಲಿ : ನಗರದ ಅಂಬೆವಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿ+2 ಆಶ್ರಯ ಮನೆಗಳ ಸಮುಚ್ಛಾಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ವಿತರಿಸಲಾದ ಮನೆಗಳ ಪೈಕಿ ನಾಲ್ಕು ಮನೆಗಳ ವಿದ್ಯುಕ್ತ ಉದ್ಘಾಟನೆಯು ಪೂಜಾ ಕಾರ್ಯಕ್ರಮದೊಂದಿಗೆ ಮಂಗಳವಾರ ನಡೆಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರ ಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ ನಂದ್ಯಾಳ್ಕರ್, ನಗರಸಭೆಯ ಸದಸ್ಯರುಗಳಾದ ರುಕ್ಮಿಣಿ ಬಾಗಡೆ ಮತ್ತು ಪ್ರೀತಿ ನಾಯರ್ ಅವರು ಬಹು ವರ್ಷಗಳ ಸ್ವಂತ ಸೂರಿನ ಕನಸು ನನಸಾಗಿದೆ. ವಸತಿರಹಿತ ಬಡವರಿಗೆ ಸ್ವಂತ ಸೂರನ್ನು ಒದಗಿಸಿ ಕೊಡಬೇಕೆಂಬ ಮಹತ್ವದ ಸಂಕಲ್ಪವನ್ನು ತೊಟ್ಟವರು ಆರ್.ವಿ.ದೇಶಪಾಂಡೆಯವರು. ಈಗಾಗಲೇ ಸಾವಿರಾರು ಸಂಖ್ಯೆಗಳಲ್ಲಿ ಆಶ್ರಯ ಮನೆಗಳನ್ನು ಒದಗಿಸಿಕೊಟ್ಟ ಕೀರ್ತಿ ಆರ್.ವಿ.ದೇಶಪಾಂಡೆ ಅವರಿಗೆ ಸಲ್ಲಬೇಕೆಂದು ಹೇಳಿ, ಮನೆಯನ್ನು ಸ್ವಚ್ಛವಾಗಿ ಮತ್ತು ಅಂದ ಚಂದವಾಗಿ ಇಟ್ಟುಕೊಳ್ಳಬೇಕೆಂದು ಕರೆ ನೀಡಿ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸಂಜಯ ಬಾಗಡೆ ಹಾಗೂ ಉದ್ಘಾಟನೆಗೊಂಡ ಮನೆಯ ಸದಸ್ಯರು ಉಪಸ್ಥಿತರಿದ್ದರು.