ಶಿರಸಿ: ಸರ್ಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸಿ ಜನರ ಬೇಡಿಕೆ ಮತ್ತು ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದ್ದು ಇಂತಹ ಕೆಲಸವನ್ನು ಗ್ರೀನ್‌ಕೇರ್ ಸಂಸ್ಥೆ ಅತ್ಯಂತ ಶ್ರದ್ದೆಯಿಂದ ಮಾಡುತ್ತಿದೆ ಎಂದು ಶಿರಸಿ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ಜಗದೀಶ ಗೌಡ ತಿಳಿಸಿದರು.
ಅವರು ಇಲ್ಲಿನ ಮಧುವನ ಹೋಟೆಲ್‌ನ ಆರಾಧನಾ ಸಭಾಂಣದಲ್ಲಿ ನಗರದ ಗ್ರೀನ್‌ಕೇರ್ ಸಂಸ್ಥೆಯ 4ನೇ ವಾರ್ಷಿಕ ಸರ್ವಸಾಧಾರಣಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಎಲ್ಲರ ಸಹಕಾರದಿಂದ ವಿಶಿಷ್ಟವಾಗಿ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ, ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಸಮಾಜಕ್ಕೆ ನಾವು ಹೃದಯದಿಂದ ಮಾಡುವ ಕೆಲಸವು ಶಾಶ್ವತವಾಗಿ ಉಳಿಯುತ್ತದೆ ಅಂತಹ ಕೆಲಸವನ್ನು ಗ್ರೀನ್‌ಕೇರ್ ಸಂಸ್ಥೆ ಮಾಡುತಿದ್ದು ನಮ್ಮ ಟ್ರಸ್ಟ್‌ವತಿಯಿಂದ ಅವರಿಗೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ ಮಾತನಾಡಿ ಸರ್ಕಾರೇತರ ಸಂಸ್ಥೆಗಳು ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಸಮಾಜಕಾರ್ಯ ಮಾಡುವ ಕಾಲಘಟ್ಟದಲ್ಲಿದ್ದೇವೆ. ಪ್ರತಿಯೊಂದು ಸಂಸ್ಥೆಗಳು ತಮ್ಮ ನೀತಿ ನಿಯಮಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಬಿ.ರಾಮಚಂದ್ರ ಭಟ್, ಮಾತನಾಡಿ ಸಂಸ್ಥೆಗಳು ಧೀರ್ಘಾವಧಿ ಧ್ಯೇಯೋದ್ದೇಶಗಳನ್ನು ಹೊಂದಿರಬೇಕು. ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕು ಎಂದು ತಿಳಿದರು, ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ-ಜಿಲ್ಲಾ ಶಾಖೆಯ ಅಧ್ಯಕ್ಷ ಮಹೇಶ ಡಿ. ನಾಯಕ ಸಮಯೋಚಿತವಾಗಿ ಮಾತನಾಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್.ಎಂ ಸ್ವಾಗತಿಸಿ ಸಂಸ್ಥೆಯು ನಡೆದು ಬಂದ ದಾರಿಯ ಹಾಗೂ 2024-25ನೇ ಸಾಲಿನ ಯೋಜನೆಗಳ ಕುರಿತು ಪಿಪಿಟಿ ಮೂಲಕ ವಿವರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ಯಾಮಸುಂದರ ಎಸ್. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ‘ಕೌಶಲ್ಯ ವಿಕಾಸ’ ಯೋಜನೆಗೆ ಧನಸಹಾಯ ಮಾಡಿದ ಗಣ್ಯರಿಗೆ ಅಭಿನಂದಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ರೋಹಿಣಿ ಸೈಲ್ ವಂದಿಸಿದರು.
ಬಾಕ್ಸ್
ಗ್ರಾಮೀಣ ಆರೋಗ್ಯ, ಹಿರಿಯ ನಾಗರಿಕರ ಸೌಖ್ಯ, ಕೌಶಲ್ಯಾಭಿವೃದ್ಧಿಯಲ್ಲಿ ಅಪಾರವಾಗಿ ಕೆಲಸ ಮಾಡುತ್ತಿರುವ ಗ್ರೀನ್‌ಕೇರ್ ಸಂಸ್ಥೆಗೆ ಸಮಾನ ಮನಸ್ಕರು ಕೈಜೋಡಿಸುವ ಅವಶ್ಯಕತೆ ಇದೆ.- ಅನಂತಮೂರ್ತಿ ಹೆಗಡೆ ಅಧ್ಯಕ್ಷರು, ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್.
ಬಾಕ್ಸ್
ಯಾವುದೇ ಸರ್ಕಾರಿ ಅನುದಾನವಿಲ್ಲದೆ ದಾನಿಗಳಿಂದ ಕ್ರೋಢಿಕರಿಸಿದ ಸಂಪನ್ಮೂಲದಲ್ಲಿ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಗ್ರೀನ್‌ಕೇರ್ ನಂತಹ ಸಂಸ್ಥೆ ಅಭಿನಂದನಾರ್ಹ- ಜಗದೀಶ ಗೌಡ, ಅಧ್ಯಕ್ಷರು, ಶಿರಸಿ ನಗರ ಯೋಜನ ಪ್ರಾಧಿಕಾರ.