ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ನೆರೆಹಾವಳಿಯಿಂದ ಹಾನಿಗೊಳಗಾದ ಹೊನ್ನಾವರ ಕಡತೋಕಾ ಗ್ರಾಮ ಪಂಚಾಯಿತ ವ್ಯಾಪ್ತಿಯ ಕೆಕ್ಕಾರ, ಲಕ್ಕುಮನೆಕೇರಿ,ಹೂಜಿಮುರಿ,ಹೆಬ್ಬಳೆಕೊಪ್ಪ,ಹೆಬ್ಬಳೆಕೇರಿ, ಕಡತೋಕ,ಗುಡ್ಡಿನಕಟ್ಟು, ನವಿಲಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಗೇರಿ,ನವಿಲಗೋಣ ಮತ್ತು ಅಂಕೋಲಾ ತಾಲೂಕಿನ ಶಿರೂರು ಗ್ರಾಮ ಪಂಚಾಯತ ಸಮೀಪದ ಮತ್ತು ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯಿತಯ ಶಿರೂರು ಸಮೀಪದ ಉಳುವರೆ ಗ್ರಾಮ ವ್ಯಾಪ್ತಿಗಳಲ್ಲಿ ಶೇಲ್ಟರ್ ಕಿಟ್ ಗಳನ್ನು ವಿತರಿಸಲಾಯಿತು. ಈ ಬಾರಿ ಮಳೆಗಾಲದಲ್ಲಿ ಅತಿ ಹೆಚ್ಚು ಗುಡ್ಡ ಕುಸಿತವಾಗಿ ಸುಮಾರಷ್ಟು ಪ್ರಾಣ ಹಾನಿಯಾದಂತಹ ಪ್ರದೇಶಗಳಿಗೆ ಮನುವಿಕಾಸ ಸಂಸ್ಥೆಯು ಭೇಟಿ ನೀಡಿ ಅಗತ್ಯ ವಸ್ತುಗಳ ಕಿಟ್‌ಗಳ ವಿತರಣೆಯನ್ನು ಮಾಡಿದೆ.ಈ ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ ಹಾಗೂ ನಮಸ್ಕಾರ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ನಾಯ್ಕ ಭಾಗವಹಿಸಿದ್ದರು. ಅಲ್ಲದೇ ಈ ಭಾಗದ ಸಾಮಾಜಿಕ ಕಾರ್ಯಕರ್ತರಾದ ಸೂರಜ್ ನಾಯ್ಕ, ಕಡತೋಕ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಾವಿತ್ರಿ ಭಟ್, ನವಿಲಗೋಣ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಾದೇವಿ ನಾಯ್ಕ ಹಾಗೂ ಕಡತೋಕ ಗ್ರಾಮ ಪಂಚಾಯತ ಪಿಡಿಒ ಬಾಲಕೃಷ್ಣ ನಾಯ್ಕ , ರೋಟರಿ ಅಧ್ಯಕ್ಷರಾದ ಅತುಲ್ ಕಾಮತ ಹಾಜರಿದ್ದರು. ಇಂದು ಸುಮಾರು 250 ಕುಟುಂಬಗಳಿಗೆ ಶೇಲ್ಟರ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.