ಶಿರಸಿ: ತಾಲೂಕಿನ ವಾನಳ್ಳಿ ಸಮೀಪದ ಶಿರಗುಣಿಯಲ್ಲಿ ನಿರಂತರ 2 ವಾರಗಳಿಂದ ಬೀಳುತ್ತಿರುವ ಮಳೆ ಮತ್ತು ಗಾಳಿಯ ಕಾರಣದಿಂದ ಪ್ರಮುಖ ಬೆಳೆಯಾದ ಅಡಿಕೆ ಬೆಳೆಗೆ ತೀವ್ರ ಹಾನಿ ಉಂಟಾಗಿದೆ. ಮಳೆಯಿಂದಾಗಿ ಇತ್ತೀಚಿಗೆ ಕೊಳೆ ರೋಗವು ವ್ಯಾಪಕವಾಗಿ ಹರಡಿದೆ. ಆರಂಭಿಕ ಲಕ್ಷಣ ಬಿಟ್ಟುಕೊಡದ ಕಾರಣ ಇದಕ್ಕೆ ಸುಲಭವಾದ ಪರಿಹಾರ ಏನು ಎನ್ನುವ ಬಗ್ಗೆ ಉತ್ತರ ಸಿಕ್ಕಿಲ್ಲ.ಗಾಳಿಯ ರಭಸದಿಂದಾಗಿ ಮರಗಳ ಮುರಿತದಿಂದ ರಾಶಿ ರಾಶಿ ಅಡಿಕೆಗಳು ಬಿದ್ದಿವೆ.ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದು, ಸರ್ಕಾರ ಎಚ್ಚೆತ್ತು ಈ ರೋಗಕ್ಕೆ ಬೇಕಾದ ಸಮರ್ಪಕ ಔಷಧಿಗಳನ್ನು ಒದಗಿಸುವುದು ಅವಶ್ಯಕವಾಗಿದೆ ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದರು.