Slide
Slide
Slide
previous arrow
next arrow

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

300x250 AD

“ವಿಸ್ತಾರಃ ಸ್ಥಾವರಃ ಸ್ತಾಣುಃ ಪ್ರಮಾಣಂ ಬೀಜಮವ್ಯಯಮ್| ಅರ್ಥೋsನರ್ಥೋ ಮಹಾ ಕೋಶೋ ಮಹಾಭೋಗೋ ಮಹಾಧನಃ” ||

ಭಾವಾರ್ಥ:-
ಸಮಸ್ತ ಲೋಕಗಳೂ ಇವನಲ್ಲಿ ವಿಸ್ತಾರ(ಅಭಿವೃದ್ಧಿ) ಹೊಂದುತ್ತವೆ. ಆದ್ದರಿಂದ ‘ವಿಸ್ತಾರನು’.ಇವನು ಅಚಲನು ಹಾಗೂ ವಿಕಾರ ರಹಿತನು ಆದ್ದರಿಂದ ‘ಸ್ಥಾವರಸ್ಥಾಣುವು’ ಎಲ್ಲರಲ್ಲಿ ಪ್ರಜ್ಞಾರೂಪದಿಂದ ಇರುವವನು. ಆದ್ದರಿಂದ ‘ಪ್ರಮಾಣನು’ ನಾಶವಾಗದ ಮೂಲ ಕಾರಣನು. ಜಗತ್ತು ನಾಶವಾದರೂ ಇವನಿಗೆ ನಾಶವಿಲ್ಲ. ಸುಖರೂಪದವನಾದುದರಿಂದ, ಎಲ್ಲರಿಂದಲೂ ಬಯಸಲ್ಪಡುವವನು. ಆದರೂ ಆಪ್ತಕಾಮನಾಗಿರುವುದರಿಂದ ಈತನಿಗೆ ಆಗಬೇಕಾದ ಪ್ರಯೋಜನ ಯಾವುದೂ ಇಲ್ಲ.ಆದ್ದರಿಂದ ‘ಅನರ್ಥನು’. ಅನ್ನಮಯವೇ ಮುಂತಾದ ಮಹಾಕೋಶಗಳು ಮರೆಯಾಗಿವೆಯಾದ್ದರಿಂದ ‘ಮಹಾಕೋಶನು’.  ಸುಖರೂಪವಾದ ಮಹಾ(ಹೆಚ್ಚಿನ) ಭೋಗವು ಈತನಿಗೆ ಇದೆಯಾದ್ದರಿಂದ ‘ಮಹಾಕೋಶನು’. ಸುಖರೂಪವಾದ ಮಹಾ(ಹೆಚ್ಚಿನ) ಭೋಗವು ಈತನಿಗೆ ಇದೆಯಾದ್ದರಿಂದ ಈತನು ‘ಮಹಾಭೋಗನು’.ಭೋಗಸಾಧನ ರೂಪವಾದ ಹೆಚ್ಚಾದ ಧನವು ಈತನಿಂದಲೇ .ಆದ್ದರಿಂದ ‘ಮಹಾಧನನು’. 

ಸ್ತೋತ್ರದ ವೈಶಿಷ್ಟ್ಯ:
ಈ ಮೇಲಿನ ಸ್ತೋತ್ರವು ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರವಾಗಿದೆ.ಇದು ಉತ್ತರಾ ನಕ್ಷತ್ರದ ೨ನೇ ಪಾದದಲ್ಲಿ ಜನಿಸಿದವರು ಪ್ರತಿನಿತ್ಯ ಹೇಳಿಕೊಳ್ಳಬೇಕಾದ ಶ್ಲೋಕವಾಗಿದೆ. ಒಳ್ಳೆಯ ಆರ್ಥಿಕ ಪ್ರಗತಿ ಸಾಧಿಸಬೇಕೆಂದರೆ, ಮಹಾಧನಿಕರೆನಿಸಬೇಕಾದರೆ, ಸುಮುಖವಾದ ಸುಖ, ಭೋಗ, ವೈಭೋಗ ಸುಗಮವಾಗಿ ದೊರಕಬೇಕಾದರೆ ಈ ಸ್ತೋತ್ರವನ್ನು ಯಾವ ನಕ್ಷತ್ರದಲ್ಲಿ ಹುಟ್ಟಿದ್ದರೂ ಹೇಳಿಕೊಳ್ಳಬೇಕು.ಆರ್ಥಿಕ ಸಂಕಷ್ಟವೆಲ್ಲಾ ಪರಿಹಾರವಾಗಿ, ಸುಖಪ್ರದ ಆರ್ಥಿಕ ಪ್ರಗತಿ ಸುಖಪೂರಿತವಾದ ಬದುಕು ನಮ್ಮದಾಗುತ್ತದೆ.

300x250 AD

(ಸಂಗ್ರಹ:- ಡಾ. ಚಂದ್ರಶೇಖರ ಎಲ್.ಭಟ್.ಬಳ್ಳಾರಿ)

Share This
300x250 AD
300x250 AD
300x250 AD
Back to top