Slide
Slide
Slide
previous arrow
next arrow

ಪತ್ರಕರ್ತರು ನೈತಿಕ ಶುದ್ಧತೆಯಿಂದಿದ್ದರೆ ಸಮಾಜದ ಗೌರವ ಸದಾ ದೊರೆಯುತ್ತದೆ: ಜಿ.ಸು.ಬಕ್ಕಳ

300x250 AD

ಯಲ್ಲಾಪುರ: ಪತ್ರಕರ್ತರು ರಾಜಕಾರಣ, ಓಲೈಕೆ ಮಾಡದೇ ತಮ್ಮತನವನ್ನು ಕಾಯ್ದುಕೊಂಡು ಹೊಗಬೇಕು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಹೇಳಿದರು.

ಅವರು ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ,ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತರು ನೈತಿಕ ಶುದ್ಧತೆ ಇಟ್ಟುಕೊಂಡಲ್ಲಿ  ಸಮಾಜದಲ್ಲಿ ಗೌರವ ಸದಾ ಸಿಗುತ್ತದೆ.  ಜಿಲ್ಲೆಯಲ್ಲಿ ಪತ್ರಕರ್ತರಿಗೆ ವಿಶೇಷ ಗೌರವ ಇದೆ. ಆದರೆ ಕೆಲವೆಡೆ ನಕಲಿ ಪತ್ರಕರ್ತರ ಹಾವಳಿ ತಲೆ ಎತ್ತುತ್ತಿದ್ದು ಅದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವ ಕಾರ್ಯ ಸಮಾಜದಿಂದ ಆಗಬೇಕು ಎಂದರು.

ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, “ಮಾಧ್ಯಮ ಅಪಾಯದ ಕಾಲಘಟ್ಟದಲ್ಲಿದೆ.  ದೃಶ್ಯಮಾಧ್ಯಮಗಳು ಹಾವಳಿ ನಡುವೆ ಪತ್ರಿಕೆಗಳ ಅಸ್ತಿತ್ವ ಉಳಿಸಿಕೊಡಲು ಶ್ರಮಿಸಬೇಕು. ಪತ್ರಿಕೆಗಳು ನಿಖರತೆ, ಸ್ಪಷ್ಟತೆ ಪಾರದರ್ಶಕತೆ,ವಿಶ್ವಾಸಾರ್ಹತೆ ಉಳಿಸಿಕೊಡಬೇಕು” ಎಂದರು. ಡಾ.ಸೌಮ್ಯ ಕೆ.ವಿ. ಆರೋಗ್ಯ ಜಾಗೃತಿಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಉಪನ್ಯಾಸ ನೀಡಿ, ಕರೊನಾ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳು ಅಪಾರವಾಗಿ ಶ್ರಮಿಸಿವೆ. ಪತ್ರಿಕೆಗಳಲ್ಲಿ ಬರುವ ಆರೋಗ್ಯ ಲೇಖನಗಳು ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಾಯಕಾರಿಯಾಗಿವೆ ಎಂದರು.‌
   ಪತ್ರಕರ್ತ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಮಾತನಾಡಿ, ಪತ್ರಕರ್ತರಿಗೆ ರಕ್ಷಣೆ,ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸರಕಾರ ಮುಂದೆ ಬರಬೇಕು ಎಂದರು.
   ಇದೇ ವೇಳೆ ಕವಿ ಪತ್ರಕರ್ತ ಸುಬ್ರಾಯ ಗಾಂವ್ಕರ ಬಿದ್ರೆಮನೆ,  ಬರಹಗಾರ ದತ್ತಾತ್ರಯ ಕಣ್ಣಿಪಾಲ್, ಸ್ವಚ್ಚತಾ ನಿರ್ವಾಹಕಿ ತುಂಗಮ್ಮ ಪಟಗಾರ, ಪತ್ರಿಕಾ ವಿತರಕರಾದ ದೀಪಕ್ ಕಲಾಲ, ಅಮೃತ ಹೇಂದ್ರೆ ಅವರನ್ನು ಸನ್ಮಾನಿಸಲಾಯಿತು.
    ಸನ್ಮಾನ ಸ್ವೀಕರಿಸಿದ ಸುಬ್ರಾಯ ಬಿದ್ರೆಮನೆ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸುವ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಲುವಾಗಿ ಸಂಘಸಂಸ್ಥೆಗಳು, ಸರ್ಕಾರ ಕೈಜೋಡಿಸಬೇಕೆಂದರು.
     ದತ್ತಾತ್ರೇಯ ಭಟ್ಟ ಕಣ್ಣಿಪಾಲ ಮಾತನಾಡಿ, ಪತ್ರಕರ್ತರಿಗೆ ಯಾವುದೇ ಗುರುತಿನ ಚೀಟಿ ಬೇಕಿಲ್ಲ. ತಮ್ಮ ಬರಹದ ಮೂಲಕವೇ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ ಎಂದರು.
    ಸಂಘದ ತಾಲೂಕಾ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಯಲ್ಲಾಪುರದ ಪತ್ರಕರ್ತರು ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ಸದಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿರುವುದು ಸಂತಸದ ಸಂಗತಿ ಎಂದರು.
     ಅಡಿಕೆ ವರ್ತಕ ಸಂಘದ ಅಧ್ಯಕ್ಷ ರವಿ ಹೆಗಡೆ, ಭಾರತ ಸೇವಾದಳದ ತಾಲೂಕಾ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಚಂದಗುಳಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ, ಸವಣಗೇರಿ ಎಸ್‌ಡಿಎಂಸಿ ಅಧ್ಯಕ್ಷ  ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ, ಇದ್ದರು. ಜಿಲ್ಲಾ ಸಂಘದ ಕಾರ್ಯದರ್ಶಿ ನರಸಿಂಹ ಸಾತೋಡ್ಡಿ ಅಭಿನಂದನಾ ಮಾತನ್ನಾಡಿದರು.
ಜಿಲ್ಲಾ ಸಮಿತಿ ಸದಸ್ಯೆ ಪ್ರಭಾವತಿ ಗೋವಿ, ತಾಲೂಕು ಸದಸ್ಯರಾದ ವಿಜಯಕುಮಾರ ನಾಯ್ಕ,ಜೈರಾಜ ಗೋವಿ,
ಸನ್ಮಾನಪತ್ರ ವಾಚಿಸಿದರು.
   ಪತ್ರಕರ್ತ ಸಂಘದ ತಾಲೂಕಾ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಸವಣಗೇರಿ ಶಾಲೆಯ ಮುಖ್ಯಾಧ್ಯಾಪಕ  ಸಂಜೀವಕುಮಾರ ಹೊಸ್ಕೇರಿ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top