Slide
Slide
Slide
previous arrow
next arrow

ಶ್ರೀವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

300x250 AD

“ಭೂತಭವ್ಯಭವನ್ನಾಥಃ ಪವನಃ ಪಾವನೋSನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ”||

ಭಾವಾರ್ಥ :-

ಹಿಂದಿನ,ಮುಂದಿನ ಮತ್ತು ಈಗಿನ ಕಾಲದಲ್ಲಿರುವ ಸಮಸ್ತ ಜೀವರಾಶಿಗಳಿಗೆ ಪ್ರಭುವು.ಆದ್ದರಿಂದ ಭೂತ ಭವ್ಯ, ಭವನ್ನಾಥನು. ಎಲ್ಲವನ್ನೂ ಪವಿತ್ರಗೊಳಿಸುವವನು. ಅಂತರಿಕ್ಷದಲ್ಲಿ ಸಂಚರಿಸುತ್ತಾ ಎಲ್ಲರಿಗೂ ಪ್ರಾಣ ನೀಡುವ ಗಾಳಿಯ ರೂಪದಲ್ಲಿರುವವನು ಆದ್ದರಿಂದ ಪವನನು. ಗಾಳಿಯು ಚಲಿಸುತ್ತಿದ್ದಲ್ಲಿ ಮಾತ್ರ ಶುದ್ಧಗೊಂಡು ಪ್ರಾಣ ನೀಡಲು ಸಾಮರ್ಥ್ಯ ವನ್ನು ಪಡೆಯುತ್ತದೆ ಗಾಳಿಯು ಚಲಿಸುವಂತೆ ಮಾಡುವವನೇ ಆ ಪರಮಾತ್ಮ.ಆದ್ದರಿಂದ ಪವನನು. ‘ಅನಲ’ ಎಂದರೆ ಅಗ್ನಿ. ದೇಹದಲ್ಲಿ ಅಥವಾ ಹೊರಗಿನ ಪ್ರಪಂಚದಲ್ಲಿ ಜೀವ ಉಳಿಯಲು ನಿರ್ದಿಷ್ಟ ಪ್ರಮಾಣದ ಉಷ್ಣತೆ ಯು ಅತ್ಯಗತ್ಯವಾಗಿದೆ.ಒಳಗಿನ ಹಾಗೂ ಹೊರಗಿನ ಈ ಉಷ್ಣತೆಯ ರೂಪ ದಲ್ಲಿರುವವನೇ ಪರಮಾತ್ಮ. ಅಲಮ್ ಎಂದರೆ ಸಾಕಾಯಿತು,ಮುಗಿಯಿತು ಎಂದರ್ಥ. ಸಾಕಾಯಿತು ಅಥವಾ ಮುಗಿಯಿತು ಎಂಬಿಲ್ಲವಾಗಿದ್ದರಿಂದ ಅನಿಲನು.ಮುಮುಕ್ಷುಗಳು ಭಕ್ತರ ಮತ್ತು ಹಿಂಸಕರ ಕಾಮಗಳನ್ನು ನಾಶಗೊಳಿಸುತ್ತಾನೆ. ಆದ್ದರಿಂದ ಕಾಮಹಾ ಎನಿಸುವನು.ಸಾತ್ವಿಕರ ಕಾಮ(ಬಯಕೆ)ಗಳನ್ನು ಪೂರ್ತಿ ಮಾಡಿಕೊಡುತ್ತಾನೆ. ಆದ್ದರಿಂದ ಕಾಮಕೃತ್ ಎನಿಸುತ್ತಾನೆ.ಕಾಮನೆಂದರೆ ಪ್ರದ್ಯುಮ್ನನು.ಅವನ ತಂದೆಯಾದ್ದರಿಂದಲೂ ಆತನು ಕಾಮಕೃತ್ ಎನಿಸುತ್ತಾನೆ.ಅತ್ಯಂತ ರೂಪವಂತನಾಗಿದ್ದರಿಂದ ಕಾಂತನು.ಪುರುಷಾರ್ಥವನ್ನು ಬಯಸುವದರಿಂದ ಕಾಮಿಸಲ್ಪಡುತ್ತಾನೆ.(ಪುರುಷಾರ್ಥವನ್ನು ಬಯಸುವವರು ಇವನನ್ನು ಬೇಕೆನ್ನುತ್ತಾರೆ.)ಆದ್ದರಿಂದ ಕಾಮಪ್ರದನು.ಪ್ರಕರ್ಷ (ಅತಿಶಯದಿಂದ) ಕೂಡಿರುತ್ತಾನೆ. ಆದ್ದರಿಂದ ಪ್ರಭುವು.

300x250 AD

ಈ ಶ್ಲೋಕದ ವೈಶಿಷ್ಟ್ಯ:-ಈ ಮೇಲಿನ ಸ್ತೋತ್ರವು ಪುಷ್ಯಾ ನಕ್ಷತ್ರದ 4ನೇ ಪಾದದವರು ಪ್ರತಿ ದಿನ 11ಬಾರಿ ಹೇಳಿಕೊಳ್ಳುವ ವಿಷ್ಣು ಸಹಸ್ರನಾಮದ ಸ್ತೋತ್ರವಾಗಿದೆ.ಆದರೂ ಪ್ರಾಪ್ತ ಹೆಣ್ಣು ಮಕ್ಕಳಿಗೆ ಸೂಕ್ತ ವರ ಮತ್ತು ಗಂಡು ಮಕ್ಕಳಿಗೆ ಸೂಕ್ತ ವಧು ಸಿಗದೇ ಇದ್ದಾಗ ಸಹ ಮೇಲಿನ ಸ್ತೋತ್ರ ವನ್ನು ಯಾವದೇ ನಕ್ಷತ್ರದಲ್ಲಿ ಜನಿಸಿದ್ದರೂ ಹೇಳಿಕೊಳ್ಳಬೇಕು. ಹಾಗೇ ಮದುವೆಯಾದ ದಂಪತಿಗಳು ಜೀವನವಿಡೀ ಅನ್ಯೋನ್ಯವಾಗಿರಬೇಕಾದರೆ ಈ ಸ್ತೋತ್ರ ಹೇಳಿಕೊಳ್ಳಬೇಕು.

(ಸಂಗ್ರಹ:-ಡಾ.ಚಂದ್ರಶೇಖರ ಎಲ್. ಭಟ್ ಬಳ್ಳಾರಿ)

Share This
300x250 AD
300x250 AD
300x250 AD
Back to top