Slide
Slide
Slide
previous arrow
next arrow

ಹೆದ್ದಾರಿ ನಿರ್ವಹಣೆಯಲ್ಲಿ ಇಲಾಖೆಯ ನಿರ್ಲಕ್ಷ್ಯ: ಕರ್ತವ್ಯ ಮರೆತರೇ ಅಧಿಕಾರಿಗಳು.!?

300x250 AD

ಇಲಾಖೆಗಳ ನಡುವೆ ಸಮನ್ವಯ ಕೊರತೆ: ವಾಹನ ಸವಾರರಿಗೆ ಚಿಂತೆ

ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆ- ಗಾಳಿಗೆ ರಾಷ್ಟ್ರೀಯ ಹೆದ್ದಾರಿ 63 ರ ಅಂಚಲ್ಲಿರುವ ಮರಗಳು ಬುಡಸಮೇತ ಒಂದರ ಹಿಂದೆ ಒಂದರಂತೆ ರಸ್ತೆಗೆ ಬೀಳುತ್ತಿವೆ. ಕೆಲವೆಡೆ ಗುಡ್ಡ ಕುಸಿತಗೊಂಡು ರಸ್ತೆ ಬ್ಲಾಕ್ ಆಗುತ್ತಿದೆ. ಮರ ಬಿದ್ದ ಮೇಲೆ ಅದನ್ನು ತೆರವುಗೊಳಿಸುವ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬರುವುದಿಲ್ಲ. ಹೆದ್ದಾರಿ ನಿರ್ವಹಣೆಯಲ್ಲಿ ಇಲಾಖೆಯ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸುತ್ತಿದ್ದಾರೆ.

ಕೇವಲ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುವುದು, ರಸ್ತೆ ಮರುಡಾಂಬರೀಕರಣ ಮಾಡುವುದಷ್ಟೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲಸವೇ? ವಾಹನ ಸವಾರರಿಗೆ ಬಡಿಯುವ ಹೆದ್ದಾರಿ ಅಂಚಲ್ಲಿ ಬೆಳೆದು ರಸ್ತೆಗೆ ಬಾಗಿರುವ ಗಿಡಕಂಟಿಗಳನ್ನು ತೆರವುಗೊಳಿಸುವುದು, ಮುರಿದು ಬಿದ್ದ ಸೂಚನಾ ಫಲಕಗಳನ್ನು ಸರಿಪಡಿಸುವುದು, ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಇವೆಲ್ಲ ಯಾವ ಇಲಾಖೆಯ ಅಡಿಯಲ್ಲಿ ಬರುತ್ತವೆ ಎಂಬುದು ಇಲಾಖೆಗಳ ನಡುವಿನ ಗೊಂದಲದಲ್ಲಿ ಜನರಿಗೆ ತಿಳಿಯದಂತಾಗಿದೆ‌.

ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ಸಮನ್ವಯದ ಕೊರತೆ ?

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರಸ್ತೆಪಕ್ಕ ಬಾಗಿರುವ ಮರಗಳು ಮುರಿದು‌ ಬೀಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ನಾವು ಬಿದ್ದ ಮರದ ಒಂದು ಮರದ ರೆಂಬೆ ಕಡಿದರೂ ಅರಣ್ಯ ಇಲಾಖೆಯವರು ಅವಕಾಶ ಕೊಡುವುದಿಲ್ಲ. ರಸ್ತೆಗೆ ಮರ ಬಿದ್ದರೇ ಅದು ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ. ಅದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ ಎಂದು ಹೇಳುತ್ತಾರೆ.

300x250 AD

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ನಿರ್ವಹಣೆಯಡಿಯಲ್ಲಿ ಬರುತ್ತದೆ. ಆದರೆ ನಾವು ಮಾನವೀಯತೆ ದೃಷ್ಟಿಯಿಂದ ಯಾವಾಗಲೂ ಮರಬಿದ್ದಾಗ ತೆರಳಿ ಸಿಬ್ಬಂದಿಗಳ ಸಹಕಾರದಿಂದ ಮರವನ್ನು ತೆರವುಗೊಳಿಸುತ್ತೇವೆ. ಎಷ್ಟೇ ರಾತ್ರಿಯಾದರೂ ಸ್ಥಳಕ್ಕೆ ತೆರಳಿ ನಮ್ಮ ಸ್ವಂತ ಖರ್ಚಲ್ಲಿ ಹೆದ್ದಾರಿಗೆ ಬಿದ್ದ ಮರವನ್ನು ತೆರವುಗೊಳಿಸುತ್ತೇವೆ. ಇದಕ್ಕಾಗಿಯೇ ನಮಗೆ ಯಾವುದೇ ಅನುದಾನ ಬರುವುದಿಲ್ಲ. ಆದರೆ ಮರ ರಸ್ತೆಗೆ ಬಿದ್ದಾಗ ಹೆದ್ದಾರಿ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬರುವುದಾಗಲಿ, ಮಾಹಿತಿ ಪಡೆಯುವುದಾಗಲಿ‌ ಮಾಡುವುದಿಲ್ಲ ಎಂದು ಹೇಸರೇಳಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಗಳು ದೂರುತ್ತಿದ್ದಾರೆ. ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.


ಬಹುತೇಕ ಕಡೆಗಳಲ್ಲಿ ಹೆದ್ದಾರಿ ಪಕ್ಕ ಮರಗಳು ಅಪಾಯಕಾರಿಯಾಗಿ ಬಾಗಿ ನಿಂತಿವೆ. ಯಾವುದೇ ಸಂದರ್ಭದಲ್ಲಿಯೂ ವಾಹನ ಸವಾರರ ಮೇಲೆ ಬೀಳಬಹುದಾದಂತಹ ಅನೇಕ ಮರಗಳಿವೆ. ಮುಂಜಾಗೃತ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಈ ಎರಡು ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕ.
ವಿಲ್ಸನ್ ಡಿಕೋಸ್ತಾ
(ಮಾಜಿ ಸದಸ್ಯರು ತಾ.ಪಂ ಅಂಕೋಲಾ)


ಹೆದ್ದಾರಿಯಲ್ಲಿ ಓಡಾಡುವ ಪ್ರತಿ ವಾಹನಗಳಿಗೂ ರಸ್ತೆ ತೆರಿಗೆಯನ್ನು ಭರಿಸಿಕೊಳ್ಳುತ್ತಾರೆ. ಆದರೆ ತೆರಿಗೆಗೆ ತಕ್ಕಂತೆ ಹೆದ್ದಾರಿ ನಿರ್ವಹಣೆಯನ್ನು ಯಾಕೆ ಮಾಡುವುದಿಲ್ಲ ಎಂದು ಸಾರ್ವಜನಿಕರು ಹೆದ್ದಾರಿ ಇಲಾಖೆಗೆ ಪ್ರಶ್ನಿಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top