ತೋಟಗಾರಿಕಾ ಇಲಾಖೆ ಶಿರಸಿ, ಜೀವವೈವಿಧ್ಯ ಮಂಡಳಿ, ತಾಲೂಕಾ ಪಂಚಾಯತ್ ಶಿರಸಿ, ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ
ಎರಡು ದಿನಗಳ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ದಿನಾಂಕ :- 29 & 30 ಜೂನ್ 2024 ಶನಿವಾರ & ಭಾನುವಾರ
ಸಮಯ :- ಬೆಳಿಗ್ಗೆ 10.00 ರಿಂದ ಸಂಜೆ 7.00
ಸ್ಥಳ :-
ನೆಲಸಿರಿ ಆರ್ಗಾನಿಕ್ ಹಬ್
117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, 581402
ಮೇಳದ ವಿಶೇಷತೆಗಳು :-
- ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ.
- ಹಲಸು ಮತ್ತು ಹಲಸಿನ ಬೀಜದಿಂದ ಮಾಡಿದ ಖಾದ್ಯಗಳ ಸ್ಪರ್ಧೆ.
- ವನಸ್ತ್ರೀ ಸಂಸ್ಥೆಯವರಿಂದ ಸಾಂಪ್ರದಾಯಿಕ ತರಕಾರಿ ಬೀಜಗಳ ಮಾರಾಟ.
- ಹಲಸಿನ ವಿಶೇಷ ತಳಿಗಳ ಪ್ರದರ್ಶನ ಮತ್ತು ಮಾರಾಟ.
- ಹೂವಿನ ಹಾಗೂ ತರಕಾರಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ.
- ‘ಸೆಲ್ಕೊ’ ಫೌಂಡೇಶನ್ ವತಿಯಿಂದ ಸೋಲಾರ್ ಆಧಾರಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ.
ಮೇಳದ ಎರಡೂ ದಿನಗಳು ಹಲಸಿನ ಸಾಂಪ್ರದಾಯಿಕ ಖಾದ್ಯಗಳ ಕ್ಯಾಂಟೀನ್ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – Tel:+918660553054