Slide
Slide
Slide
previous arrow
next arrow

ಜಿ.ಯು.ಎನ್.ಅಭಿನಂದನಾ ಕಾರ್ಯಕ್ರಮ: ಸಚಿವ ವೈದ್ಯ ಆತ್ಮಿಯ ಸ್ಪಂದನೆ

300x250 AD

ಅಂಕೋಲಾ: ತಾಲೂಕಿನ ಹಿರೇಗುತ್ತಿಯ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಸಹೃದಯಿ, ಶೈಕ್ಷಣಿಕ, ಸಾಹಿತಿ, ಕವಿ ಜಿ.ಯು. ನಾಯಕ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದವರಿಂದ ಅಭಿನಂದನಾ ಗ್ರಂಥವನ್ನು ಹೊರತಂದು ಕುಮಟಾದಲ್ಲಿ ಮುಂದಿನ ತಿಂಗಳ ಕೊನೆಯಲ್ಲಿ ಅದ್ಧೂರಿಯಾಗಿ ಸನ್ಮಾನಿಸಲು ನಿಶ್ಚಯಿಸಲಾಗಿದೆ.

ಗೌರವ ಅಧ್ಯಕ್ಷರಾಗಿ ಜಿಲ್ಲಾ ಉಸ್ತವಾರಿ ಸಚಿವರು ಮತ್ತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯರವರನ್ನು ಸಮಿತಿ ಆಯ್ಕೆ ಮಾಡಿದೆ. ನಿವೃತ್ತ ಆಫ್ರೀಕನ್ ಯುನಿವರ್ಸಿಟಿ ಡೀನ್, ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಯಕ್ಷಗಾನ ವಿದ್ವಾಂಸರು ಆದ ಪ್ರೊಪೆಸರ್ ಡಾ|| ಜಿ.ಎ. ಹೆಗಡೆ ಸೋಂದಾ-ಶಿರಸಿ ಅವರನ್ನು ಕಾರ್ಯಾಧ್ಯಕ್ಷರಾಗಿ ಸಮಿತಿ ಸರ್ವಾನುಮತದಿಂದ ನಿಯುಕ್ತಿಗೊಳಿಸಿದೆ.

ನೆಮ್ಮದಿ ಯೋಗಕೇಂದ್ರ ಶಿರಸಿಯ ಸಂಚಾಲಕ ಸೊಮಪ್ರಕಾಶ ಶೇಟ್, ಉಪಾಧ್ಯಕ್ಷರಾಗಿ ದಿವ್ಯಪ್ರಕಾಶ ನಾಯಕ, ಬೆಂಗಳೂರು ಕಾರ್ಯದರ್ಶಿಯಾಗಿ, ಭವ್ಯಾ ನಾಯಕ, ಬೆಂಗಳೂರು ಎಸ್.ಬಿ.ಐ. ಉದ್ಯೋಗಿ  ಖಜಾಂಚಿಯಾಗಿ ಸದಸ್ಯರಾಗಿ, ಹಿರಿಯ ಸಾಹಿತಿ ಡಿ.ಎಸ್.ನಾಯಕ ಕಾರ್ಯನಿರ್ವಹಿಸಲಿದ್ದಾರೆ. ಜೆ.ಯು.ನಾಯಕ ಅಭಿನಂದನಾ ಗ್ರಂಥದ ಸಂಪಾದಕರಾಗಿ ಪ್ರೊಪೆಸರ್ ಜಗನ್ನಾಥ ಎನ್.ಎಮ್. ಕರಿಕಲ್ ಮುಖ್ಯಸ್ಥರು ಕನ್ನಡ ವಿಭಾಗ ಎಂ.ಜಿ.ಸಿ. ಕಾಲೇಜು ಸಿದ್ಧಾಪುರ. ಉಪಸಂಪಾಧಕರಾಗಿ ಇತಿಹಾಸ ಪ್ರಾಧ್ಯಾಪಕ ಪ್ರೊಪೆಸರ್ ವಿ.ಕೆ.ನಾಯ್ಕ ನಾಡುಮಾಸ್ಕೇರಿ ಸರಕಾರಿ ಪದವಿ ಪೂರ್ವ ಕಾಲೇಜು ನಿಲೇಕಣಿ ಕೊಡುಗೆ ನೀಡುತ್ತಿದ್ದಾರೆ.ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಡಾ. ಜಿ.ಎ.ಹೆಗಡೆ ಸೋಂದಾ- ಶಿರಸಿ, ಸೋಮಪ್ರಕಾಶ ಶೇಟ್ ಶಿರಸಿ, ಪ್ರೊಪೆಸರ್ ಜಗನ್ನಾಥ ಕರಿಕಲ್, ಸಿದ್ಧಾಪುರ, ಪ್ರೊಪೆಸರ್ ವಿ.ಕೆ.ನಾಯಕ ಶಿರಸಿ ಸೇರಿ ಜು.6ರಂದು ಹೊನ್ನಾವರದ ಐ.ಬಿ.ಯಲ್ಲಿ ಗೌರವಾಧ್ಯಕ್ಷ ಮಂಕಾಳ ವೈದ್ಯರನ್ನು ಸನ್ಮಾನಿಸಿ ಕಾರ್ಯಕ್ರಮದ ರೂಪುರೇಶೆಯ ಕುರಿತು ಚರ್ಚಿಸಿದರು.

300x250 AD

ಮಾನ್ಯ ಸಚಿವರು ಸಮಿತಿಯವರನ್ನು ಅಭಿನಂದಿಸಿ ಸಮಾಜದಲ್ಲಿ ಇಂತಹ ಧನಾತ್ಮಕ ಕಾರ್ಯಕ್ರಮಗಳು ನಡೆಯುತ್ತಿರಬೇಕು, ಸತ್ಪಾತ್ರರನ್ನು ಗೌರವಿಸುವುದು ಸುಸಂಸ್ಕೃತ ಸಮಾಜದ ಲಕ್ಷಣ ಎಂದು ಪ್ರೀತ್ಯಾಧರದಿಂದ ಸ್ಪಂದಿಸಿ ಅಭಿನಂದನಾ ಸಮಿತಿಯ ಕಾರ್ಯ ವೈಖರಿಯನ್ನು ಪ್ರಶಂಸಿಸಿದರು.

Share This
300x250 AD
300x250 AD
300x250 AD
Back to top