Slide
Slide
Slide
previous arrow
next arrow

ಸತ್ಯ,ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಯಿರುವ ಅಧಿಕಾರಿಗೆ ಬೇಡಿಕೆ ಜಾಸ್ತಿ: ಮುಳಖಂಡ

300x250 AD

ಶಿರಸಿ: ಸತ್ಯ, ಪ್ರಾಮಾಣಿಕತೆ, ಸೇವಾಗುಣವುಳ್ಳ ಅಧಿಕಾರಿಗಳಿಗೆ ಯಾವಾಗಲೂ ಬೇಡಿಕೆ ಇದೆ. ಕರ್ತವ್ಯ ನಿಷ್ಠೆಗಳನ್ನು ಹೊಂದಿರುವುದು ಪ್ರತಿಯೊಬ್ಬ ಉದ್ಯೋಗಿಯ ಕರ್ತವ್ಯ.ಈ ಗುಣಗಳನ್ನು ಹೊಂದಿರುವುದರಿಂದಲೇ  ಎಂಇಎಸ್ ವಸತಿ ನಿಲಯಗಳ ಸಮಿತಿ ಇಂದು ನಾಲ್ಕು ವಸತಿ ನಿಲಯಗಳಾದ ಸಹ್ಯಾದ್ರಿ, ವರದ, ಶಾಲ್ಮಲಾ, ಶರಾವತಿಗಳ ಸಂಚಾಲಕರಾದ ಪ್ರಾಚಾರ್ಯ ಡಾ. ಟಿ.ಎಸ್ ಹಳೆಮನೆಯವರಿಗೆ ಶಾಲ್ಮಲಾ ವಸತಿ ನಿಲಯದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಮ್ಮೆಯ ಸಂಗತಿ ಎಂದು ಎಂಇಎಸ್ ಅಧ್ಯಕ್ಷ ಜಿ.ಎಂ ಹೆಗಡೆ ಮುಳಖಂಡ ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಪಿ.ಶೆಟ್ಟಿ ಮಾತನಾಡಿ ಶ್ರದ್ಧೆ, ಶೀಘ್ರ ನಿರ್ಣಯ ಕೈಗೊಳ್ಳುವ ಶಕ್ತಿ, ಕೆಲಸದಲ್ಲಿ ಪರಿಪಕ್ವತೆ ಇರುವ ವ್ಯಕ್ತಿ ನಾಯಕನಾಗಿ ಬೆಳೆಯುತ್ತಾನೆ. ಡಾ. ಟಿ. ಎಸ್. ಹಳೆಮನೆ ಅಂತಹ ನಾಯಕತ್ವವನ್ನು ಹೊಂದಿದ್ದಾರೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದರು.

ಸನ್ಮಾನ್ಯ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಡಾ.ಟಿ. ಎಸ್. ಹಳೆಮನೆ ಶಿರಸಿಯ ಮೊಡರ್ನ ಎಜುಕೇಶನ್ ಸೊಸೈಟಿ ನನ್ನನ್ನು ನಾಯಕನನ್ನಾಗಿ ಮಾಡಿದೆ. ಸಂಸ್ಥೆ ತನ್ನೆಲ್ಲ ಸಹಕಾರವನ್ನು ನನಗೆ ನೀಡಿದೆ ಎಂದರು. ಶಿಸ್ತು ಮತ್ತು ಸಂಯಮಗಳನ್ನು ಆರಂಭ ಹಂತದಿಂದ ರೂಢಿಸಿ ಕೊಂಡಿರುವುದರಿಂದ ಎಲ್ಲವನ್ನು ಸರಿದೂಗಿಸಿಕೊಂಡುಹೋಗುವ ಸಾಮರ್ಥ್ಯ ಬೆಳೆಯಿತು ಎಂದರು.

300x250 AD

ಕಾರ್ಯಕ್ರಮದಲ್ಲಿ ಎಂಇಎಸ್ ಖಜಾಂಚಿ ಸುಧೀರ ಭಟ್ಟ, ವಸತಿ ನಿಲಯಗಳ ಉಪಸಮಿತಿ ಅಧ್ಯಕ್ಷ ಜಿ.ಎನ್.ಹೆಗಡೆ ಮುರೆಗಾರ, ಸದಸ್ಯರುಗಳಾದ ಎಂ.ಎಸ್. ಹೆಗಡೆ ಕೊಪ್ಪ, ಶ್ರೀಧರ್ ನಾಯಕ್ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀಮತಿ ಲತಾ ಗಿರಿಧರ್ ಹೆಗಡೆ ಸ್ವಾಗತಿಸಿದರು. ಪ್ರೊ.ಶೈಲಜಾ ಭಟ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸನ್ಮಾನ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳು, ಪ್ರಾಧ್ಯಾಪಕರು, ವಾರ್ಡನ್ ಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top