ಶಿರಸಿ: ಯಕ್ಷನೃತ್ಯದ ಮೂಲಕ ವಿಶ್ವಶಾಂತಿ ಸಂದೇಶ ರೂಪಕ ಪ್ರಸ್ತುತಗೊಳಿಸುತ್ತಲೇ ವಿಶ್ವದಾಖಲೆ ಗೈದ ಕು. ತುಳಸಿ ಹೆಗಡೆ ಅವಳನ್ನು ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯರು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ಉಪಪ್ರಾಚಾರ್ಯರಾದ ಯಜ್ಞೇಶ್ವರ ನಾಯ್ಕ, ಕಲೆಯ ಮೂಲಕ ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದು ಸಂತಸವಾಗಿದೆ. ಈಕೆ ನಮ್ಮ ಶಾಲೆಯ ಹತ್ತನೆ ವರ್ಗದ ವಿದ್ಯಾರ್ಥಿನಿ ಎಂಬುದು ನಮ್ಮ ಹೆಮ್ಮೆ ಎಂದರು.
ವಿದ್ಯಾರ್ಥಿನಿ ತುಳಸಿ ಹೆಗಡೆ ಪ್ರತಿಕ್ರಿಯಿಸಿ, ನನ್ನ ಕಲೆಯ ಬೆಳೆವಣಿಗೆಯಲ್ಲಿ ಶಾಲೆಯ ಕೊಡುಗೆ ಅನನ್ಯ. ಗುರುವೃಂದದ ಸಹಕಾರ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದಳು. ವರ್ಗ ಶಿಕ್ಷಕಿ ಜಯಲಕ್ಷ್ಮೀ ಗುನಗಾ ಸನ್ಮಾನ ಪತ್ರ ವಾಚಿಸಿದರು. ಕನ್ನಡ ಭಾಷಾ ಶಿಕ್ಷಕ ಶ್ರೀಧರ ನಿರ್ವಹಿಸಿದರು. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವೃಂದ ಉಪಸ್ಥಿತರಿದ್ದು ಶುಭಾಶೀರ್ವಾದಗೈದರು.
ಅಭಿನಂದನೆ: ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಓದುವ ತುಳಸಿ ಹೆಗಡೆ ಸಾಧನೆಗೆ ಡಿಡಿಪಿಐ ಬಸವರಾಜ್ ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ, ಮಂಜುನಾಥ ಮೊಗೇರ ಇತರರು ಅಭಿನಂದಿಸಿದ್ದಾರೆ.