Slide
Slide
Slide
previous arrow
next arrow

ಹೊನ್ನಾವರದಲ್ಲಿ ನೆರೆ ಹಾವಳಿ : ಕಾಳಜಿ ಕೇಂದ್ರ ಪ್ರಾರಂಭ

300x250 AD

ಹೊನ್ನಾವರ : ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮನೆ – ತೋಟಕ್ಕೆ ನುಗ್ಗಿದ ಪರಿಣಾಮ ನೆರೆ ಹಾವಳಿ ಉಂಟಾಗಿದೆ.

ಗುಂಡಮಾಳ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಗುಂಡಬಾಳ ಪಂಚಾಯತಿ ವ್ಯಾಪ್ತಿಯ ಹಿ.ಪ್ರಾ ಗುಂಡಿಬೈಲ್. ಹಿ. ಪ್ರಾ ಶಾಲೆ ಗುಂಡಬಾಳ ನಂ 2 ಮತ್ತು ಹೆಬೈಲ್ ಅಂಗನವಾಡಿ ಕೇಂದ್ರಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. ಮಳೆ ಹೀಗೆ ಮುಂದುವರಿದಲ್ಲಿ ನದಿ ತಟದ ಮತ್ತಷ್ಟು ಜನರಿಗೆ ನೆರೆ ಭೀತಿ ಕಾಡುತ್ತಿದೆ.

ಬಾಸ್ಕೇರಿ ರಸ್ತೆ ಸಂಚಾರ ಮುಕ್ತ :
ಗುಡ್ಡ ಕುಸಿತವಾಗಿ ಸಂಚಾರ ಸ್ಥಗಿತಗೊಂಡ ರಾಷ್ಟ್ರೀಯ ಹೆದ್ದಾರಿಯ 69 ಹೊನ್ನಾವರ – ಗೇರುಸೊಪ್ಪ ಸಂಚಾರ ಮುಕ್ತ ಗೊಳಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮರ ಕಡಿದು ತೆರವು ಗೊಳಿಸಲಾಗಿದೆ.

300x250 AD

ಶಾಲೆಗೆ ರಜೆ ಘೋಷಣೆ
ತಾಲೂಕಿನ ಐದು ಗ್ರಾಮಗಳ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಜನತಾ ವಿದ್ಯಾಲಯ ಅನಿಲಗೋಡ್ ,ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ,ಗುಂಡ ಬಾಳ ನಂ-2,ಗುಂಡಿ ಬೈಲ್ ನಂ 2,ಹುಗ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್, ಕಿರಿಯ ಪ್ರಾಥಮಿಕ ಶಾಲೆ ಗಂಜಿಗೆರೆ ಈ ಶಾಲೆಗಳಿಗೆ ರಜೆ ಘೋಷಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top