ದಾಂಡೇಲಿ : ರಾಜ್ಯ ಸರ್ಕಾರ ಬಡವರು ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಪಡಿಸಿದೆ. ಅವುಗಳಲ್ಲಿ ಮುಖ್ಯವಾಗಿ ವಿದ್ಯುತ್ ರಿಯಾಯಿತಿ ಯೋಜನೆಯು ಪ್ರಮುಖವಾಗಿದೆ. ಆರ್ಥಿಕ ಸಂಪನ್ನರು ಉಚಿತ ವಿದ್ಯುತ್ ಬಳಕೆ ಮಾಡುವುದು ಸೂಕ್ತವಲ್ಲ. ಹಾಗಾಗಿ ಆರ್ಥಿಕ ಸಂಪನ್ನರು ವಿದ್ಯುತ್ ರಿಯಾಯಿತಿ ಯೋಜನೆಯನ್ನು ಕೈಬಿಡುವುದು ಒಳಿತೆಂದು ಶಾಸಕರಾದ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ದಾಂಡೇಲಿ ನಗರಸಭೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹಳಿಯಾಳ -ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 56,500 ವಿದ್ಯುತ್ ಗ್ರಾಹಕ ಕುಟುಂಬಗಳಿದ್ದು, ಅವುಗಳ ಪೈಕಿ ಒಟ್ಟು 525 ಕುಟುಂಬಗಳು ಮಾತ್ರ ವಿದ್ಯುತ್ ಬಿಲ್ಲನ್ನು ಪಾವತಿಸುತ್ತಿವೆ. ಸರಕಾರದ ಯೋಜನೆಗಳನ್ನು ಬಡವರು ಮತ್ತು ಜನಸಾಮಾನ್ಯರು ಬಳಕೆ ಮಾಡಬೇಕೆ ವಿನ: ಆರ್ಥಿಕ ಸ್ಥಿತಿವಂತರು ಈ ಯೋಜನೆಯ ಫಲಾನುಭವಿಗಳಾಗಬಾರದೆಂದು ವಿನಂತಿಸಿದರು.