Slide
Slide
Slide
previous arrow
next arrow

ವಾಹನ ಸಂಚಾರ ನಿಯಮ ಉಲ್ಲಂಘನೆ: 54 ಪ್ರಕರಣ ದಾಖಲು

300x250 AD

ಶಿರಸಿ: ಶಿರಸಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ನಿಯಂತ್ರಿಸುವ ಸಲುವಾಗಿ ಶುಕ್ರವಾರ ಸಾಯಂಕಾಲ ಶಿರಸಿ ನಗರ ಠಾಣೆಯ ಪೊಲೀಸರು ನಿಲೇಕಣಿ ನಾಕಾದಲ್ಲಿ ವಿಶೇಷ ಸಂಚಾರ ಡ್ರೈವ್ ಕಾರ್ಯಾಚರಣೆ  ಹಮ್ಮಿಕೊಂಡು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ದ ಭಾರತೀಯ ಮೊಟಾರು ವಾಹನ ಕಾಯ್ದೆಯಡಿಯಲ್ಲಿ ಒಟ್ಟು 54 ಪ್ರಕರಣಗಳನ್ನು ದಾಖಲಿಸಿ 28,500 ರೂ. ದಂಡ ವಿಧಿಸಿದ್ದಾರೆ.

ದೋಷಪೂರಿತ ಎಲ್ಇಡಿ ಲೈಟ್ ಬಳಕೆ: ಮುಂದುವರೆದ ಕಾರ್ಯಾಚರಣೆ:

300x250 AD

ವಾಹನಗಳಿಗೆ ಹೆಚ್ಚಿನ ಪ್ರಖರತೆವುಳ್ಳ ಎಲ್ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಸವಾರರ ಮೇಲೆ ಕಾರ್ಯಾಚರಣೆ ಮುಂದುವರೆಸಿ ಐಎಂವಿ ಕಾಯ್ದೆಯಡಿ ಒಟ್ಟು 23  ಪ್ರಕರಣ ದಾಖಲಿಸಿ 13,000/- ರೂ. ದಂಡ ವಿಧಿಸಿದ್ದಾರೆ
ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆ‌ಎಲ್,ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ.ನೇತೃತ್ವದಲ್ಲಿ ಎಎಸ್ಐಗಳಾದ ಹೊನ್ನಪ್ಪ ಅಗೇರ,ನೆಲ್ಸನ್ ಮೆಂಥಾರೋ,ಸಿಬ್ಬಂದಿಗಳಾದ ಹನುಮಂತ ಕಬಾಡಿ,ಮಂಜುನಾಥ ಕಾಶಿಕೊವಿ, ಚನ್ನಬಸಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top