Slide
Slide
Slide
previous arrow
next arrow

ಯೋಗವನ್ನು ಯಜ್ಞವನ್ನಾಗಿಸಿ ಸಾಧನೆ ಮಾಡಬೇಕು: ಸ್ವರ್ಣವಲ್ಲೀ ಶ್ರೀ

300x250 AD

ಯೋಗೋತ್ಸವಕ್ಕೆ ಚಾಲನೆ ನೀಡಿ, ಯೋಗ ಮಾಡಿದ ಶ್ರೀದ್ವಯರು | ಯೋಗದಿಂದ ವಿಶ್ವ ಒಂದಾಗುತ್ತಿದೆ

ಶಿರಸಿ: ಯೋಗವನ್ನು ಒಂದು ಯಜ್ಞವಾಗಿಸಿ ಸಾಧನೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.

300x250 AD

ಅವರು ತಾಲೂಕಿನ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಮಠದ ಮಹಾ ಪಾಠ ಶಾಲೆ, ಸೋಂದಾ ಗ್ರಾಮ ಪಂಚಾಯತ್ ಸಂಯುಕ್ತ ಸಹಕಾರದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿನ ಯೋಗೋತ್ಸವಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು. ಯಜ್ಞಗಳ ಸಾಲಿನಲ್ಲಿ ಯೋಗವೂ ಒಂದು ಯಜ್ಞ ಎಂಬ ಉಲ್ಲೇಖವಿದೆ. ಇದನ್ನು ನಾವು ಯಜ್ಞವನ್ನಾಗಿ ಮಾಡಬೇಕು. ಯೋಗವನ್ನು ಹೀಗೆ ಮಾಡಬೇಕು ಎಂಬ ಕ್ರಮದಂತೇ ಮಾಡಬೇಕು. ಹಲವು ಕ್ರಮ ಇದ್ದರೂ ಯಾವುದಾದರೂ ಒಂದು ಕ್ರಮ ನಾವು ಪಾಲಿಸಬೇಕು, ಯಾವುದೇ ಆಸನ, ಪ್ರಾಣಾಯಾಮ ಮನಸ್ಸು ಕೊಟ್ಟು ಮಾಡಬೇಕು. ಯೋಗದ ಕೊನೆಯಲ್ಲಿ ದೇವರಿಗೆ ಈಶ್ವರಾರ್ಪಣೆ ದೃಷ್ಟಿಯಲ್ಲಿ ಅರ್ಪಣೆ ಮಾಡಬೇಕು. ಈ ಮೂರು ಯೋಗದಲ್ಲಿ ಆಳವಡಿಸಿಕೊಂಡರೆ ಯೋಗವೂ ಒಂದು ಯಜ್ಞವಾಗುತ್ತದೆ. ಅದರಿಂದ ಆರೋಗ್ಯದ ಜೊತೆ ಆಧ್ಯಾತ್ಮಿಕ ಪ್ರಯೋಜನ ಇದೆ. ಚಿತ್ತದ ಶುದ್ಧಿ, ಜ್ಞಾನ ಪ್ರಾಪ್ತಿಗಳಿವೆ ಎಂದರು. ಯೋಗ ಸ್ವರೂಪಿ ಪರಮಾತ್ಮ. ನಿದ್ರೆಯ, ಉಸಿರಾಟದದಲ್ಲಿ ಹಿಡಿತ ಯೋಗ ಸಾಧಕರಿಗೆ ಸಿಗುತ್ತದೆ. ಸತತ ಸಂತೃಪ್ತ ಇರುತ್ತದೆ. ಇಂದ್ರೀಯ ಸಮೂಹ ಮೇಲೆ ಹತೋಟಿ ಇರುತ್ತದೆ.
ಯೋಗದ ಅಂತಿಮ ಪ್ರಯೋಜನ ಎಂದರೆ ಪರಮಾತ್ಮನ ಜ್ಯೋತಿ ಕಾಣುತ್ತದೆ ಎಂದೂ ಬಣ್ಣಿಸಿದ ಶ್ರೀಗಳು, ಯೋಗವನ್ನು ಯೋಗ ದಿನಾಚರಣೆ ದಿನ ಮಾತ್ರ ಮಾಡಬಾರದು. ಪ್ರತಿ ದಿನವೂ ಯೋಗ ಮಾಡಬೇಕು ಎಂದು ಯೋಗ ದಿನಾಚರಣೆ ಸೂಚಿಸುತ್ತದೆ. ನಿತ್ಯವೂ ಕ್ರಮ ಬದ್ಧವಾಗಿ ಯೋಗಾನುಷ್ಠಾನ ಮಾಡಬೇಕು ಎಂದರು. ಈ ವೇಳೆ ಶ್ರೀಮಠದ ಕಿರಿಯ ಯತಿಗಳಾದ ಶ್ರೀಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಸಾನ್ನಿಧ್ಯ ನೀಡಿದ್ದರು. ಬಳಿಕ ಉಭಯ ಶ್ರೀಗಳ ಜೊತೆಗೆ ಮಠದ ಶಿಷ್ಯರು, ಸಾರ್ವಜನಿಕರು, ಪಾಠಶಾಲೆಯ ಸಮಸ್ತರು ಯೋಗೋತ್ಸವದಲ್ಲಿ ಭಾಗವಹಿಸಿದ್ದರು.ರಘುರಾಮ ಹೆಗಡೆ‌ ಯೋಗ ಹೇಳಿಕೊಟ್ಟರು.

  • ಸ್ವರ್ಣವಲ್ಲೀ ಮಠದ ದೊಡ್ಡ ಗುರುಗಳು
Share This
300x250 AD
300x250 AD
300x250 AD
Back to top