Slide
Slide
Slide
previous arrow
next arrow

ಆರೋಪಿತರ ಮೇಲೆ ಕ್ರಮಕ್ಕಾಗಿ ಮನವಿ ಸಲ್ಲಿಕೆ

300x250 AD

ಶಿರಸಿ: ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ಅವಧಿಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾಗಿದ್ದ ರವೀಶ ಅಚ್ಯುತ ಹೆಗಡೆ ಹಾಗೂ ಇತರರು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಕಲಂಗಳು ಹಾಗೂ ಸಂಘದ ನಿಯಮಾವಳಿಗೆ ವಿರುದ್ಧವಾಗಿ ನಡೆಸಿದ ಅವ್ಯವಹಾರಗಳ ಕುರಿತಂತೆ ಈಗಾಗಲೇ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಮತ್ತಿಘಟ್ಟ ಮನವಿಯನ್ನು ಸಲ್ಲಿಸಿದರು.

ಹಾಲಿ ಆಡಳಿತ ಮಂಡಳಿಯು ಲೆಕ್ಕ ಪರಿಶೋಧಕರಿಂದ ಮರು ಲೆಕ್ಕ ಪರಿಶೋಧನೆ ನಡೆಸುತ್ತಿದೆ. ಸದರಿ ಲೆಕ್ಕ ಪರಿಶೋಧಕರು ನೀಡಿದ ಮಧ್ಯಂತರ ವರದಿಯನ್ನು ಆಧರಿಸಿ ಸಂಘದ ಅವ್ಯಹಾರಗಳಲ್ಲಿ ಭಾಗಿಯಾದವರ ಮೇಲೆ ಪೋಲಿಸ್ ನೀರಿಕ್ಷಕರು ಹೊಸ ಮಾರುಕಟ್ಟೆ ಪೋಲಿಸ್ ಠಾಣೆ ಶಿರಸಿ ಇದರಲ್ಲಿ 6 ಕ್ರಿಮಿನಲ್ ಪ್ರಕರಣಗಳನ್ನು ಸಂಘದಿಂದ ದಾಖಲಿಸಲಾಗಿತ್ತು. ಸದರಿ ಪ್ರಕರಣಗಳ ಕುರಿತು ತನಿಖೆಗಳು ಇನ್ನೂ ಪ್ರಾರಂಭವಾಗದೇ ಇರುವ ಹಿನ್ನೆಲೆಯಲ್ಲಿ ಜೂ.14 ರಂದು ಉಪ ಪೋಲಿಸ್ ಅಧಿಕ್ಷಕರ ಕಚೇರಿ ಶಿರಸಿಗೆ ತೆರಳಿ ಹೊಸದಾಗಿ ಉಪ ಪೋಲಿಸ್ ಅಧಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಗಣೇಶ ಕೆ.ಎಲ್. ಅವರನ್ನು ಭೇಟಿ ಮಾಡಿ ಈಗಾಗಲೇ ದಾಖಲಿಸಿದ 6 ಕ್ರಿಮಿನಲ್ ಪ್ರಕರಣಗಳ ಕುರಿತು ಶೀಘ್ರವಾಗಿ ತನಿಖೆ ಪ್ರಾರಂಭಿಸುವಂತೆ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಸಲ್ಲಿಸಲಾಗಿದೆ.

300x250 AD

ಈ ಸಂದರ್ಭಲ್ಲಿ ಸಂಘದ ಉಪಾಧ್ಯಕ್ಷ ಎಮ್.ಎನ್.ಭಟ್ಟ ತೋಟಿಮನೆ, ನಿರ್ದೇಶಕರುಗಳು, ಶಾಖಾ ಸಲಹಾ ಸಮಿತಿ ಸದಸ್ಯರು, ಖ್ಯಾತ ಪರಿಸರವಾದಿ ಹಾಗೂ ಬರಹಗಾರ ಶಿವಾನಂದ ಕಳವೆ ಹಾಗೂ ಸಂಘದ ರೈತ ಸದಸ್ಯರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top