Slide
Slide
Slide
previous arrow
next arrow

TSS ಪ್ರಕರಣ: ಬೆಳಗಾವಿ ಜೆ.ಆರ್. ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

300x250 AD

ಹಾಲಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರ ಬಣಕ್ಕೆ ಅಲ್ಪ ಹಿನ್ನಡೆ | ಡಿ.ಆರ್. ಕೋರ್ಟಿನ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್

ಶಿರಸಿ: ರಾಜ್ಯದ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಟಿಎಸ್ಎಸ್ ನಲ್ಲಿ ಆಡಳಿತ ವಿಷಯದಲ್ಲಿ ಪುನಃ ಟ್ವಿಸ್ಟ್ ಸಿಕ್ಕಿದ್ದು, ಬೆಳಗಾವಿಯ ಜಂಟಿ ನಿಬಂಧಕರು ನೀಡಿದ ಆದೇಶಕ್ಕೆ ಧಾರವಾಡ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ.

ಕಳೆದ ಒಂದು ತಿಂಗಳಿನಿಂದ ಟಿಎಸ್ಎಸ್ ನಲ್ಲಿ ಆಡಳಿತ ವಿಷಯಕ್ಕೆ ಸಂಬಂಧಿಸಿ ಸಾಕಷ್ಟು ಬದಲಾವಣೆಗಳು ನಡೆದಿದೆ. 2023 ರ ಅಗಸ್ಟ್ ತಿಂಗಳಲ್ಲಿ ಟಿಎಸ್ಎಸ್ ನಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿ ಷೇರು ಸದಸ್ಯ ವಿನಾಯಕ ಭಟ್ ಎಂಬುವರು ಕಾರವಾರ ಸಹಕಾರ ಇಲಾಖೆಯ ಉಪನಿಬಂಧಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇದಕ್ಕೆ ಸಂಬಂಧಿಸಿ ಉಪ ನಿಬಂಧಕರು ಚುನಾವಣೆ ಸರಿಯಾಗಿ ನಡೆದಿಲ್ಲ. ಕಾರಣ ಹಾಲಿ ಆಡಳಿತ ಮಂಡಳಿಯನ್ನು‌ ರದ್ದು ಮಾಡಿ ವಿಶೇಷಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.‌

ಇದರಿಂದ ಟಿಎಸ್ಎಸ್ ನಲ್ಲಿ ಮೊದಲ ಬಾರಿಗೆ ಇಂತಹ ಘಟನೆ ಜರುಗಿತ್ತು. ಚುನಾಯಿತ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತು ತಂಡದವರು ಉಪ ನಿಬಂಧಕರ ಆದೇಶದ ಮೇಲೆ ಬೆಳಗಾವಿಯ ಜಂಟಿ ನಿರ್ದೇಶಕರಿಂದ ತಡೆಯಾಜ್ಞೆ ತಂದಿದ್ದರು. ಬಳಿಕ ವಿನಾಯಕ ಭಟ್ ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದರು. ಇದಕ್ಕೆ ಸಂಬಂಧಿಸಿ ಗುರವಾರ ಆದೇಶ ಬಂದಿದ್ದು, ಜಂಟಿ ನಿರ್ದೇಶಕರ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎನ್ನಲಾಗಿದೆ.‌

ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಪ್ರಕಾರ ಟಿಎಸ್ಎಸ್ ಗೆ ಪುನಃ ವಿಶೇಷಾಧಿಕಾರಿ ನೇಮಕ ಆಗಲಿದೆಯೇ ಅಥವಾ ಈಗಿರುವ ಆಡಳಿತ ಮಂಡಳಿಯೇ ಮುಂದುವರೆಸಿಕೊಂಡು ಹೋಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದ್ದು, ಕಾರವಾರ ಉಪ ನಿಬಂಧಕರ ಆದೇಶ ಜಾರಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋರ್ಟ್ ಹೇಳಿದ್ದಿಷ್ಟು !

300x250 AD

ಧಾರವಾಡದ ಉಚ್ಛ ನ್ಯಾಯಾಲಯದಲ್ಲಿ ಶೇರು ಸದಸ್ಯ ವಿನಾಯಕ ಭಟ್ಟ ಹೊಸ್ಕೆರೆ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ರವಿಶಂಕರ್ ಹಾಗು ಶರದ್ ಗೌಡ ಪಾಟೀಲ್ ವಾದ ಮಾಡಿದರೆ, ಜೆ.ಆರ್. (ರಾಜ್ಯ ಸರಕಾರ) ದ ಪರವಾಗಿ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖ್ಯಾತ ವಕೀಲ ಜಯಕುಮಾರ್ ಪಾಟೀಲ್ ಹಾಗು ಅರುಣಾಚಲ ಹೆಗಡೆ ಜಾನ್ಮನೆ ವಾದ ಮಂಡಿಸಿದ್ದರು. ಸುದೀರ್ಘ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ವಾದ-ಪ್ರತಿವಾದವನ್ನು ಆಲಿಸಿದ ಏಕಸದಸ್ಯ ಪೀಠ ಮಧ್ಯಂತರ ತೀರ್ಪು ಪ್ರಕಟಿಸಿ, ಬೆಳಗಾವಿಯ ಸಂಯುಕ್ತ ಪ್ರಬಂಧಕರ ಆದೇಶಕ್ಕೆ ತಡೆ ನೀಡಿ, ಈ ಹಿಂದೆ ಜಿಲ್ಲಾ ಸಹಕಾರ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು, ಮುಂದಿನ ವಿಚಾರಣೆಯನ್ನು ಜೂ.22 ಕ್ಕೆ ನಿಗಧಿಪಡಿಸಿ, ಆದೇಶ ಹೊರಡಿಸಿದೆ. ಗುರುವಾರ ನ್ಯಾಯಾಲಯದಲ್ಲಿ ಶೇರು ಸದಸ್ಯ ವಿನಾಯಕ ಭಟ್ಟ ಅವರ ಪರ ವಕೀಲ ರವಿಶಂಕರ್ ಪ್ರತಿಪಾದಿಸಿದ ಎರಡು ಪ್ರಶ್ನೆಗೆ ಪ್ರತಿಯಾಗಿ ಎದುರಿನ ನ್ಯಾಯವಾದಿಗಳು ವಾದ ಮಂಡಿಸುವಲ್ಲಿ ನಿರುತ್ತರರಾದರು ಎನ್ನಲಾಗಿದೆ.

ಮುಂದೇನು ಆಗಬಹುದು ?

ನ್ಯಾಯಾಲಯದಲ್ಲಿ ಜೂ. 22 ಕ್ಕೆ ವಿಚಾರಣೆ ಬಾಕಿ ಇರುವುದರಿಂದ, ಈಗಿನ ಮಧ್ಯಂತರ ಆದೇಶದ ಪ್ರಕಾರ ಆಡಳಿತಾಧಿಕಾರಿ ಸಂಸ್ಥೆಗೆ ಬಂದು ಜವಾಬ್ದಾರಿ ವಹಿಸಿಕೊಳ್ಳುವರೋ ಅಥವಾ ಈಗಿರುವ ಅನರ್ಹರು ಎನಿಸಿಕೊಂಡಿರುವ ನೂತನ ಆಡಳಿತ ಮಂಡಳಿಯೇ ಅಧಿಕಾರದಲ್ಲಿ ಮುಂದುವರೆಯುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಶುಕ್ರವಾರ ನೂತನ ಆಡಳಿತ ಮಂಡಳಿಯವರು ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠದಲ್ಲಿ (ಡಿವಿಸನಲ್ ಬೆಂಚ್) ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ದಾಖಲಿಸಲು ತಯಾರಿ ನಡೆದಿದೆ ಎನ್ನಲಾಗಿದ್ದು, ಅಲ್ಲಿನ ತೀರ್ಪನ್ನು ನೋಡಿಕೊಂಡು ವೈದ್ಯರ ಬಣ ಮುಂದಿನ ನಡೆಯನ್ನು ನಿರ್ಧರಿಸಬಹುದು ಎನ್ನಲಾಗಿದೆ.

ಈ ಹಿಂದೆ ಡಿ.ಆರ್. ನ್ಯಾಯಾಲಯ ಹೊರಡಿಸಿದ್ದ ಮರು ಚುನಾವಣೆಗೆ ತೀರ್ಪಿಗೆ ಸಂಬಂಧಿಸಿ, ಜೂ.18 ರಂದು ಕೆಎಟಿಯಲ್ಲಿ (ಕರ್ನಾಟಕ ರಾಜ್ಯ ಮೇಲ್ಮನವಿ ಆಡಳಿತ ಮಂಡಳಿ) ಪ್ರಕರಣದ ವಿಚಾರಣೆ ಇದೆಯೆಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿನ ತೀರ್ಪಿನ ಮೇಲೆ ಎರಡೂ ಕಡೆಯವರ ಮುಂದಿನ ನಡೆಯನ್ನು ಗುರುತಿಸಬೇಕಿದೆ. ಸದ್ಯಕ್ಕಂತೂ ಗೋಪಾಲಕೃಷ್ಣ ವೈದ್ಯ ಮತ್ತೀಘಟ್ಟ ನೇತೃತ್ವದ ಹೊಸ ಆಡಳಿತ ಮಂಡಳಿಗೆ ಹಿನ್ನಡೆಯಾಗಿದ್ದು, ಶೇರು ಸದಸ್ಯರಿಗೆ ತುಸು ಮುನ್ನಡೆ ದೊರೆತಿದೆ.

Share This
300x250 AD
300x250 AD
300x250 AD
Back to top