ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ನಿಲ್ಲಿಸಿಟ್ಟ ಕಾರಿಗೆ ಕಂಟೇನರ್ ವಾಹನ ಗುದ್ದಿದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವಂತೆ ನರೇಂದ್ರ ಕಂಟೇನರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ.
ತಮಿಳುನಾಡಿನ ಪದ್ಮನಾಭ ಕೃಷ್ಣಪ್ಪ ಎಂಬ ಕಂಟೇನರ್ ಚಾಲಕ ನಿಲ್ಲಿಸಿಟ್ಟ ಕಾರಿಗೆ ಗುದ್ದಿ, ಕಾರನ್ನು ಜಖಂ ಮಾಡಿದ್ದಾನೆ. ಆತನ ನಿರ್ಲಕ್ಷ್ಯತನದ ಚಾಲನೆಯಿಂದ ತನಗೆ ಹಾನಿಯಾಗಿದೆ ಎಂದವರು ದೂರಿದ್ದಾರೆ.
ನಿಲ್ಲಿಸಿಟ್ಟ ಕಾರ್‌ಗೆ ಕಂಟೇನರ್ ಡಿಕ್ಕಿ
![](https://euttarakannada.in/wp-content/uploads/2024/06/IMG-20240611-WA0104-730x438.jpg)