Slide
Slide
Slide
previous arrow
next arrow

ಮತದಾನ ಮೂಲಕ ನಂದಿಗದ್ದೆ ಶಾಲಾ ಸಂಸತ್ತು ರಚನೆ

300x250 AD

ಜೋಯಿಡಾ:ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ನಂದಿಗದ್ದೆ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕಲಿಕೆಯ ಸಮಯದಲ್ಲೇ ಚುನಾವಣೆಯ ಮಹತ್ವ,ಚುನಾವಣೆಯ ಪ್ರಕ್ರಿಯೆ,ಮತದಾನದ ಮಹತ್ವ,ಮತದಾನ ಪ್ರಕ್ರಿಯೆ,ಶಾಲಾ ಸಂಬಂಧಿಸಿದ ಸಂಸತ್ತಿನ  ಚಟುವಟಿಕೆಗಳ ಅರಿವು ಮೂಡಿಸುವ ಉದ್ದೇಶದಿಂದ 2024-2025ನೇ ಸಾಲಿನ ಶಾಲಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಶಾಲಾ ಸಂಸತ್ತಿನ ರಚನೆಯ ನಿಮಿತ್ತ ಚುನಾವಣೆ ಪ್ರಕ್ರಿಯೆ ಮತದಾನದ ಮೂಲಕ ನಡೆದು ಆಯ್ಕೆಗೊಂಡಿತು.           
ಸಾರ್ವತ್ರಿಕ ಚುನಾವಣೆಯಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು.ಮತದಾನದ ಕೊಠಡಿ, ಮತಪತ್ರ, ಮತಪೆಟ್ಟಿಗೆ, ಬಂದೋಬಸ್ತ್ ವ್ಯವಸ್ಥೆ,ಗುರುತಿನ ಚೀಟಿಯಾಗಿ ಶಾಲಾ ಗುರುತಿನ ಚೀಟಿ,ಶಾಲಾ ಗುರುತಿನ ಚೀಟಿ ಇಲ್ಲದವರಿಗೆ ಆಧಾರ್ ಕಾರ್ಡನ್ನು ಗುರುತಿನ ಚೀಟಿಯನ್ನಾಗಿ ಅವಕಾಶ ಮಾಡಿಕೊಡಲಾಯಿತು.ಒಟ್ಟು 46 ವಿದ್ಯಾರ್ಥಿಗಳು ಸರತಿಯ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನದ ಹಕ್ಕನ್ನು ಚಲಾಯಿಸಿದರು.                                       
ಚುನಾವಣೆಯ ಪ್ರಕ್ರಿಯೆಯ ಮತಗಟ್ಟೆ ಅಧಿಕಾರಿಗಳಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ,ಸಹ ಶಿಕ್ಷಕರಾದ ಭುವನೇಶ್ವರ ಮೆಸ್ತಾ,ಶೋಭಾ ಮೇಡಂ,ಹನುಮಂತ ಕೊರಗರ ನ್ಯಾಯ,ಮುಕ್ತ ಸಮ್ಮತ,ಅಚ್ಚು ಕಟ್ಟಾದ ಚುನಾವಣೆಯ ಮತದಾನದ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.ಚುನಾವಣಾ ಮತದಾನ ಪ್ರಕ್ರಿಯೆಯ ವೀಕ್ಷಕರಾಗಿ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ಉಪಸ್ಥಿತರಿದ್ದರು.                     

ಶಾಲಾ ಮುಖ್ಯಮಂತ್ರಿಯಾಗಿ ಸಿಲ್ವನ್ ಜೋನ ಪೆರೇರಾ, ಉಪಮುಖ್ಯಮಂತ್ರಿ ಮಿಥುನ್ ನರಸಿಂಹ ಭಾಗವತ,ಪ್ರಾರ್ಥನಾ ಮಂತ್ರಿ, ನಂದಕುಮಾರ ಡಿ ಉಪಾಧ್ಯ,ಉಪಮಂತ್ರಿ ಮರೀಶಾ ಎಮ್ ಫರ್ನಾಂಡಿಸ್,ಬಿಸಿಯೂಟ ಮಂತ್ರಿ ಪ್ರಾರ್ಥನಾ ಸುಬ್ರಾಯ ದಾನಗೇರಿ,ಉಪ ಮಂತ್ರಿ ಅಂಕಿತಾ ಅಶೋಕ ಗಾಂವಕರ, ಕ್ರೀಡಾ ಮಂತ್ರಿ ದರ್ಶನ ಚಂದ್ರಕಾಂತ ರಾಯಕರ,ಉಪಮಂತ್ರಿ ಕೆನ್ನಿತ ಪಾವ್ಲು ಫರ್ನಾಂಡಿಸ್,ಸಾಂಸ್ಕ್ರತಿಕ ಮಂತ್ರಿ ವಿಶಾಂತ ಮಹಾದೇವ ಎಲ್ಲೇಕರ,ಉಪಮಂತ್ರಿ ಕ್ರಿಸ್ಟನ್ ಇನಾಸ್ ಫರ್ನಾಂಡಿಸ್,ವಾಚನಾಲಯ ಮಂತ್ರಿ ಸ್ಪಂದನಾ ನರಸಿಂಹ ಭಾಗವತ,ಉಪ ಮಂತ್ರಿ ರಮ್ಯಾ ವಿವೇಕಾನಂದ ಸಾವರ್ಕರ್,ಆರೋಗ್ಯ ಮಂತ್ರಿ ನಿರಂಜನ. ಯು .ಹೆಗಡೆ,ಉಪಮಂತ್ರಿ ಮನೋಜ ಮಾರುತಿ ಕುಟ್ಟಿಕರ,ಸ್ವಚ್ಛತಾ ಮಂತ್ರಿ ಪ್ರವೀಣ ನಾರಾಯಣ ವೇಳಿಪ,ಉಪಮಂತ್ರಿ ಪ್ರಜ್ಞಾ ಗಣೇಶ ಡಿಗ್ಗಿಕರ ಆಯ್ಕೆಯಾದರು.

300x250 AD
Share This
300x250 AD
300x250 AD
300x250 AD
Back to top