Slide
Slide
Slide
previous arrow
next arrow

ವೈವಿಧ್ಯಮಯ ಗಿಡಗಳ ವಿಶ್ವಾಸಾರ್ಹ ಮೂಲ ‘ಕದಂಬ ಸಸ್ಯ ಸಂತೆ’: ಶಿವಾನಂದ ಕಳವೆ 

300x250 AD

ಶಿರಸಿ: ಸತತ 14 ವರ್ಷಗಳಿಂದ ಆಯೋಜಿಸುತ್ತಿರುವ ಕದಂಬ ಸಸ್ಯಸಂತೆಯನ್ನು ಖ್ಯಾತ ಪರಿಸರ ಬರಹಗಾರ ಶಿವಾನಂದ ಕಳವೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕದಂಬ ಮಾರ್ಕೆಟಿಂಗ್ ಸಹಕಾರಿ ವ್ಯವಸ್ಥೆಯಲ್ಲಿ ಈ ಥರದ ವೈವಿದ್ಯಮಯ ಚಟುವಟಿಕೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಹಿಂದೆಲ್ಲ ನರ್ಸರಿ ಎಂದರೆ ಕೇರಳ ದಕ್ಷಿಣ ಕನ್ನಡದ ಕಡೆ ಹೋಗಬೇಕಿತ್ತು. ಅಲ್ಲಿಂದ ಗಿಡಗಳನ್ನು ತರುವಲ್ಲಿ ಸಾಗಾಣಿಕೆ ಸಮಸ್ಯೆ, ವಿಶ್ವಾಸಾರ್ಹತೆ ಕೊರತೆಯಿಂದಾಗಿ ಅನೇಕ ರೈತರು ಗಿಡ ನಾಟಿ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಕದಂಬದಂಥ ಸಹಕಾರಿ ಸಂಸ್ಥೆಗಳು ವೈವಿಧ್ಯಮಯ ಕಸಿಗಿಡಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವದು ರೈತರಿಗೆ ಅನುಕೂಲಕರವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವೇಶ್ವರ ಭಟ್ಟ ಕೋಟೆಮನೆ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಆವರಣದಲ್ಲಿ ಸಸ್ಯಸಂತೆ ಪ್ರಾರಂಭವಾಗಿದ್ದು ಜಾಯಿಕಾಯಿ, ಲವಂಗ, ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೋ,ಕಾಫಿ, ಅಪ್ಪೆ,ಮಾವು, ಹಲಸು,ವಿವಿಧ ಜಾತಿಯ ಹಣ್ಣಿನ, ಹೂವಿನ  ಮತ್ತು ಅಲಂಕಾರಿಕ ಗಿಡಗಳು ಲಭ್ಯವಿರುತ್ತವೆ.  ಇದರೊಂದಿಗೆ ನಾಗಸಂಪಿಗೆ, ಸಿಮಾರುಬಾ, ಹೊಂಗೆ ಮತ್ತಿತರ ಜೈವಿಕ ಇಂಧನ ಗಿಡಗಳನ್ನೂ ವಿತರಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾದರೀ ರೈತರಾದ ಚಿನ್ಮಯ ಹೆಗಡೆ ಬೊಮ್ನಳ್ಳಿಯವರು ರೈತರಿಗೆ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಗಿಡಗಳನ್ನು ಒದಗಿಸುವ ಉದ್ದೇಶದಿಂದ ಈ ಸಂತೆಯನ್ನು ಆಯೋಜಿಸಲಾಗಿದ್ದು ಉತ್ತಮ ಕಾರ್ಯ. ಈ ಥರದ ಕಾರ್ಯಕ್ರಮದಿಂದಾಗಿ ರೈತರಿಗೆ ಗುಣಮಟ್ಟದ ಗಿಡಗಳು ವಿಶ್ವಾಸಾರ್ಹ ಮೂಲದಿಂದ ದೊರೆಯುವಂತಾಗಿದೆ ಎಂದರು.

300x250 AD

ಅಧ್ಯಕ್ಷತೆವಹಿಸಿದ್ದ ಶಂಭುಲಿಂಗ ಹೆಗಡೆ ಯಾವುದೇ ರೈತರು ತಾವು ಬೆಳೆಸಿದ, ಕಸಿ ಮಾಡಿದ ಗಿಡಗಳನ್ನು ಮಾರಾಟ ಮಾಡಲು ಸಸ್ಯಸಂತೆ ವೇದಿಕೆಯಾಗಿದ್ದು ಇದರ ಪ್ರಯೋಜನ ಪಡೆಯಬಹುದು. ಸಂಸ್ಥೆಯು ಗುಣಮಟ್ಟದ ಗಿಡಗಳನ್ನು ಒದಗಿಸಲು ಶ್ರಮಿಸುತ್ತಿದೆ ಎಂದರು. ರೈತರಾದ ಆರ್.ಜಿ.ಭಟ್ಟ ದೇವತೆಮನೆ, ನರಹರಿ ಹೆಗಡೆ ಕುಳಿಮನೆ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ರಾಜೇಂದ್ರ ಜೋಶಿ ವಂದಿಸಿ ಹೆಚ್ಚಿನ ಮಾಹಿತಿಗಾಗಿ ಕದಂಬ ಮಾರ್ಕೆಟಿಂಗ್ ಎ.ಪಿ.ಎಮ್.ಸಿ ಯಾರ್ಡ ಶಿರಸಿ (Tel:+918296497574) ಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. 

Share This
300x250 AD
300x250 AD
300x250 AD
Back to top