Slide
Slide
Slide
previous arrow
next arrow

ಧ್ಯಾನದಿಂದ ಆರೋಗ್ಯ ವೃದ್ಧಿ : ಬ್ರಹ್ಮರ್ಷಿ ಪ್ರೇಮನಾಥ ಜಿ.

300x250 AD

ಅಂಕೋಲಾ: ಪ್ರತಿಯೊಬ್ಬರೂ ಇಂದಿನ ದಿನಗಳಲ್ಲಿ ಧ್ಯಾನ ಮಾಡುವುದರ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಬೆಂಗಳೂರಿನ ಸೀನಿಯರ್ ಪಿರಮಿಡ್ ಮಾಸ್ಟರ್ ಬ್ರಹ್ಮರ್ಷಿ ಪ್ರೇಮನಾಥ ಜಿ. ಹೇಳಿದರು.

ತಾಲೂಕಿನ ಕಲಾಭಾರತಿ ಟ್ರಸ್ಟ್ ಅಂಕೋಲಾ ವತಿಯಿಂದ ಖಾಸಗಿ ಹೋಟೆಲ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಧ್ಯಾನ ಸಮೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ನಮ್ಮದು ಆತ್ಮ, ನಾನು ಮನುಷ್ಯನಲ್ಲ ನಾನು ಭಗವಂತ ಎಂದು ಅರಿಯಬೇಕು, ಭಗವದ್ಗೀತೆಯನ್ನು ಓದುವುದರೊಂದಿಗೆ ಅದನ್ನು ಅಳವಡಿಸಿಕೊಂಡರೆ ಮಾತ್ರ ನಾವೆಲ್ಲರೂ ಶ್ರೇಷ್ಠವಾದ ಜೀವನವನ್ನು ನಡೆಸಲು ಸಾಧ್ಯ. ಯುವಕರಲ್ಲಿ ಧ್ಯಾನಮಾಡುವವರು ವಯೋಸಹಜರು ಎಂಬ ಭಾವನೆಯಿದೆ ಅದನ್ನು ಬದಲಿಸಿ ಪ್ರತಿಯೊಬ್ಬರು ಧ್ಯಾನ,ಯೋಗದಿಂದ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು, ನಮ್ಮ ದುಃಖಕ್ಕೆ ಕಾರಣ ನಮ್ಮ ಮನಸ್ಸು ಹೊರತು ಮತ್ತೇನು ಅಲ್ಲ ,ಯಾರು ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾನೋ ಅವನೇ ಯೋಗಿ, ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುದೇ ನಿಜವಾದ ಧರ್ಮ,ಇಂದಿನ ದಿನಗಳಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ತೆರಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ,ಮಾನಸಿಕ ಒತ್ತಡದಿಂದ ಅನಾರೋಗ್ಯ ಸಂಭವಿಸುತ್ತದೆ,ಇದಕ್ಕೆಲ್ಲ ಔಷಧವಿದ್ದರೆ ಅದು ಧ್ಯಾನ ಮಾತ್ರ ಎಂದರು.

ಮುಖ್ಯ ಅತಿಥಿ ದಾವಣಗೆರೆ ಸೀನಿಯರ್ ಪಿರಮಿಡ್ ಮಾಸ್ಟರ ಮಾರುತಿ ರಾಮ್ ಮಾತನಾಡಿ ಧ್ಯಾನದಿಂದ ಸರ್ವ ರೋಗ,ಸರ್ವ ಕಷ್ಟಗಳು ನಿವಾರಣೆಯಾಗುತ್ತದೆ. ಅಂಕೋಲೆಯಲ್ಲಿ ಧ್ಯಾನದ ಬಗ್ಗೆ ಅರಿವು ಮೂಡಿಸುತ್ತಿರುವ ಸಂಘಟಕ ಪ್ರಶಾಂತ ಶೆಟ್ಟಿಯವರ ಕಾರ್ಯ ಶ್ಲಾಘನೀಯ. ಇಂದಿನ ದಿನಗಳಲ್ಲಿ ಮಾನವ ಕೌಟುಂಬಿಕ,ಆರ್ಥಿಕ ಸಮಸ್ಯೆಯಿಂದ ಬಳಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅನಾರೋಗ್ಯಕ್ಕೀಡಾಗುತ್ತಿದ್ದಾನೆ.ಇಂತಹ ಸಮಸ್ಯೆಗಳಿಂದ ಮುಕ್ತಿ ದೊರೆಯಬೇಕಾದರೆ ಇರುವುದು ಒಂದೇ ಮಾರ್ಗವೇ ಧ್ಯಾನ ಎಂದರು.

300x250 AD

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಅಧ್ಯಕ್ಷ ಡಾ. ವಿಜಯದೀಪ್, ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ವಿನಾಯಕ ಹೆಗಡೆ, ಪುರಸಭಾ ಮಾಜಿ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ವೇದಿಕೆಯಲ್ಲಿದ್ದು ಮಾತನಾಡಿದರು.

ಪತ್ರಕರ್ತ ವಿಠ್ಠಲದಾಸ ಕಾಮತ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮರ್ಷಿ ಪ್ರೇಮನಾಥ ಜಿ,ಮಾರುತಿ ರಾಮ್,ನಿವೃತ್ತ ದೈಹಿಕ ಶಿಕ್ಷಕ ಎಂ.ಎಂ.ಕರ್ಕಿಕರ್ ಅವರನ್ನು ಸನ್ಮಾನಿಸಲಾಯಿತು. ದರ್ಶಿನಿ ಶೆಟ್ಟಿ ಪ್ರಾರ್ಥಿಸಿದರು. ಪ್ರಶಾಂತ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸುಧಾ ಶೆಟ್ಟಿ ನಿರೂಪಿಸಿದರು. ವಿ.ಕೆ.ನಾಯರ್ ವಂದಿಸಿದರು.

Share This
300x250 AD
300x250 AD
300x250 AD
Back to top