Slide
Slide
Slide
previous arrow
next arrow

ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ವಂಚನೆ: ದೂರು ದಾಖಲು

300x250 AD

ಯಲ್ಲಾಪುರ: ವ್ಯಕ್ತಿಯೊಬ್ಬ ನಕಲಿ ದಾಖಲೆ ನೀಡಿ ಕಾರ್‌ಲೋನ್ ಪಡೆದು ಕೆಡಿಸಿಸಿ ಬ್ಯಾಂಕ್‌ಗೆ ವಂಚಿಸಿದ ಕುರಿತು ಮಂಗಳವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ ತಾಲೂಕಿನ ಭೈರುಂಬೆ ದೇವರಕೇರಿಯ ರಾಜಾರಾಮ ರಾಮಚಂದ್ರ ಹೆಗಡೆ, ಸಾಲಕ್ಕೆ ಜಾಮೀನುದಾರರಾಗಿರುವ ಈರ್ವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ರಾಜಾರಾಮ ರಾಮಚಂದ್ರ ಹೆಗಡೆ ಕಳೆದ ಜನವರಿ 2 ರಂದು ಮಂಚಿಕೇರಿಯ ಕೆಡಿಸಿಸಿ ಬ್ಯಾಂಕ್ ಶಾಖೆಗೆ ಬಂದು ಹುಂಡೈ ಕ್ರೆಟಾ ಕಾರು ಖರೀದಿಗೆ 15 ಲಕ್ಷ ರೂ. ಸಾಲ ಬೇಕೆಂದು ಅರ್ಜಿ ನೀಡಿದ್ದಾನೆ. ಹುಬ್ಬಳ್ಳಿಯ ಶೋರೂಂ ಒಂದರ ದರಪಟ್ಟಿ ನೀಡಿದ್ದು, ಸಾಲ‌ ಮಂಜೂರಿ ಮಾಡಿ ಬ್ಯಾಂಕ್‌ನಿಂದ ಶೋರೂಂ ಖಾತೆಗೆ 15 ಲಕ್ಷ ರೂ.ಹಣವನ್ನು ವರ್ಗಾಯಿಸಲಾಗಿತ್ತು. ನಿಯಮದಂತೆ ವಿಮೆ, ತೆರಿಗೆ ತುಂಬಿದ ದಾಖಲೆಗಳು, ಕಾರಿನ ಎರಡು ಚಾವಿಯನ್ನೂ ಆತ ಬ್ಯಾಂಕ್‌ಗೆ ನೀಡಿದ್ದ. ಅನುಮಾನ ಬರದಂತೆ ಒಂದು ಕಂತು ಸಾಲವನ್ನೂ ಮರುಪಾವತಿ ಮಾಡಿದ್ದ.

300x250 AD

ನಂತರ ಬ್ಯಾಂಕ್‌ನವರು ಕಾರನ್ನು ಒಮ್ಮೆ ಬ್ಯಾಂಕ್‌ಗೆ ಖುದ್ದಾಗಿ ಹಾಜರುಪಡಿಸುವಂತೆ ತಿಳಿಸಿದಾಗ ಬಂದಿರಲಿಲ್ಲ. ವಾಹನ ರೆಜಿಸ್ಟ್ರೇಷನ್‌ಗಾಗಿ ಅಗತ್ಯ ದಾಖಲೆಗಳನ್ನು ಆರ್.ಟಿ.ಒ ಕಚೇರಿಗೆ ಒದಗಿಸುವಂತೆ ಆತನಿಗೆ ನೀಡಿದ ನೋಟಿಸ್ ಮರಳಿ ಬಂದಿದೆ. ಆಗ ಜಾಗೃತರಾದ ಬ್ಯಾಂಕ್ ಸಿಬ್ಬಂದಿ ಆತ ನೀಡಿದ ದಾಖಲೆಗಳನ್ನು ಪ್ರಧಾನ ಕಚೇರಿಗೆ ಕಳುಹಿಸಿದ್ದು, ಅಲ್ಲಿ ಪರಿಶೀಲಿಸಿದಾಗ ಎಲ್ಲಾ ದಾಖಲೆಗಳು ನಕಲಿ ಎಂಬುದು ಪತ್ತೆಯಾಗಿದೆ. ಆತ ನೀಡಿದ ಕಾರಿನ ಚಾವಿಗಳು ನಕಲಿಯಾಗಿರುವುದು, ವಾಹನ ನೋಂದಣಿ ಸಂಖ್ಯೆಯೂ ಕಾಲ್ಪನಿಕವಾಗಿರುವುದು ತಿಳಿದು ಬಂದಿದೆ.
ಈ ಕುರಿತು ಕೆಡಿಸಿಸಿ ಬ್ಯಾಂಕ್ ನ ಮಂಚಿಕೇರಿ ಶಾಖಾ ವ್ಯವಸ್ಥಾಪಕ ರಾಮಕೃಷ್ಣ ಗಣಪತಿ ಉಪಾಧ್ಯ ದೂರು ನೀಡಿದ್ದು, ಮಂಗಳವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top