ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಹತ್ತಿರದ ಹಂಗಾರಖಂಡ ಗ್ರಾಮದಲ್ಲಿ ಮೇ.25,ಶನಿವಾರ ವೇ|| ಮೂ|| ವಿನಾಯಕ ಸು. ಭಟ್ಟ ಮತ್ತೀಹಳ್ಳಿ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ,ಹಂಗಾರಖಂಡ ತ್ಯಾಗಲಿ ಸಿದ್ದಾಪುರ ಉತ್ತರಕನ್ನಡ ಇವರ ಸಮರ್ಥ ಸಂಯೋಜನೆ ಮತ್ತು ಸಂಘಟನೆಯಲ್ಲಿ , ಕಲಾಭಿಮಾನಿಗಳ ಮತ್ತು ಹಂಗಾರಖಂಡದ ಸಮಸ್ತ ಊರನಾಗರಿಕರ ಸಂಪೂರ್ಣ ಸಹಕಾರದೊಂದಿಗೆ ಹಂಗಾರಖಂಡದ ಸುಪುತ್ರ ವೀರಯೋಧ ಹುತಾತ್ಮ CRPF ದಿ.ಸಂದೀಪ ನಾರಾಯಣ ನಾಯ್ಕ ಅವರ “ನಾಮಪಲಕ ಸ್ಥಾಪನಾ ಪೂಜೆ” ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ನಂತರ ಸಂಜೆ 8-30ರಿಂದ “ಸಾಂಸ್ಕೃತಿಕ ಸಮಾರಂಭ” ಅಂಗವಾಗಿ ಯಕ್ಷರಂಗದ ಅಗ್ರಮಾನ್ಯ ದಿಗ್ಗಜ ಕಲಾವಿದರಿಂದ ” ಯಕ್ಷಗಾನ ಹಿಮ್ಮೇಳ ವೈಭವ ” ವೀರಯೋಧ CRPF ದಿ.ಸಂದೀಪ ನಾ ನಾಯ್ಕ ಸವಿನೆನಪಿನ ಮೈದಾನದಲ್ಲಿ ಜನಮನಸೂರೆಗೊಂಡಿತು. ಸಂಜೆ ಸಾಂಸ್ಕೃತಿಕ ಸಮಾರಂಭ (ಯಕ್ಷಗಾನ ಹಿಮ್ಮೇಳ ವೈಭವ) ವನ್ನು ವೇ|| ಮೂ|| ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ದೀಪ ಬೆಳಗಿಸಿ ಉದ್ಘಾಟಿಸಿದರು, ಆ ಸಂದರ್ಭದಲ್ಲಿ ಶ್ರೀ ಸ್ವರ್ಣವಲ್ಲಿ ಆಡಳಿತ ಮಂಡಳಿಯ ಸದಸ್ಯರಾದ & ತ್ಯಾಗಲಿ ಸೇವಾ ಸಹಕಾರಿ ಸಂಘದ ಹಿರಿಯ ನಿರ್ದೇಶಕರಾದ ಎಮ್.ಆರ್.ಹೆಗಡೆ ಬಾಳೇಜಡ್ಡಿ ಮತ್ತೀಹಳ್ಳಿ, & ತ್ಯಾಗಲಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಸಚ್ಚಿದಾನಂದ ಜಿ.ಹೆಗಡೆ ಬೆಳಗದ್ದೆ, ಎ.ಜಿ.ನಾಯ್ಕ,ತ್ಯಾಗಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ವಸಂತ ಕೆ. ಹೆಗಡೆ , ಸಂಘಟನೆಯ ಸಮಿತಿಯ ಪಧಾಧಿಕಾರಿಗಳಾದ ಎಮ್.ಎಮ್.ಹೆಗಡೆ, ರಮೇಶ ನಾ. ನಾಯ್ಕ ಬಾಳೇಕೈ, ಗಣಪತಿ ವಿ ಹೆಗಡೆ, ನಟರಾಜ ಎಮ್.ಹೆಗಡೆ, ರಮೇಶ ಟಿ. ನಾಯ್ಕ, ಹರೀಶ ರಾಮಾ ನಾಯ್ಕ, ನಾಗರಾಜ ಆರ್.ನಾಯ್ಕ,ರವೀಂದ್ರ ಡಿ.ಹೆಗಡೆ, ಸಂತೋಷ ನಾ. ನಾಯ್ಕ, ನಾರಾಯಣ ಜಿ.ನಾಯ್ಕ , ವಾಸುದೇವ ನಾ.ನಾಯ್ಕ, ಪ್ರವೀಣ ಜಿ. ನಾಯ್ಕ, ಪ್ರದೀಪ ರಾಮಾ ನಾಯ್ಕ ,ಶ್ರೀಮತಿ ಯಮುನಾ ನಾಗೇಶ ಹೆಗಡೆ, ಜಿ.ವಿ.ನಾಯ್ಕ.ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ಯಕ್ಷರಂಗದ ಅಗ್ರಮಾನ್ಯ ದಿಗ್ಗಜ ಕಲಾವಿದರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಸುನೀಲ್ ಭಂಡಾರಿ, ಸುಜನ್ ಹಾಲಾಡಿ ಅವರಿಂದ ಅದ್ದೂರಿ ಗಾನವೈಭವ ಜರುಗಿತು. ಕಾರ್ಯಕ್ರಮದ ಸಂಘಟಕರು ಆಶಿಸಿದ ಇಪ್ಪತ್ತೈದಕ್ಕೂ ಹೆಚ್ಚಿನ ಹಾಡನ್ನು ರಾಮ- ರಾಘವರು ದ್ವಂದ್ವ ಹಾಡಿನ ಮೂಲಕ ಜನಮನಸೂರೆಗೊಳ್ಳುವಂತೆ ಹಾಡಿದರು.ನಮ್ಮ ಭಾರತ ದೇಶಕ್ಕಾಗಿ ಪ್ರಾಣ ತೆತ್ತ ವೀರಯೋಧ ಹುತಾತ್ಮ ದಿ. ಸಂದೀಪ ನಾರಾಯಣ ನಾಯ್ಕ ಅವರ ಬಗ್ಗೆ ಹಾಡಿದ ಪದ್ಯ ಸೇರಿದ ಸುಮಾರು ನಾಲ್ಕೈದು ನೂರು ಜನರ ಕಣ್ಣೀರಿಗೆ ಸಾಕ್ಷಿಯಾಯಿತು. ಆಗಮಿಸಿದ ಯಕ್ಷರಂಗದ ಅಗ್ರಮಾನ್ಯ ಕಲಾವಿದರೆಲ್ಲರನ್ನೂ ಸಂಘಟಕರು ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮದ ಮಧ್ಯಂತರದಲ್ಲಿ ಸೇರಿದ ಎಲ್ಲಾ ಕಲಾವಿದರಿಗೆ ಮತ್ತು ಕಲಾ ಪೋಷಕರಿಗೆ, ಕಲಾಪ್ರೇಮಿಗಳಿಗೆ ಉಪಹಾರ- ಚಹಾ- ಪಾನೀಯಗಳ ವ್ಯವಸ್ಥೆಯನ್ನು ಸಂಘಟಕರು ಏರ್ಪಡಿಸಿದ್ದರು, ಕಾರ್ಯಕ್ರಮದ ಪೂರ್ವದಲ್ಲಿ ಸ್ವಾಗತ & ನಿರೂಪಣೆಯನ್ನು ಸಮಿತಿಯ ಪದಾಧಿಕಾರಿಗಳಾದ ರಮೇಶ ಟಿ. ನಾಯ್ಕ ಸುಂದರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಸಮಿತಿ ಪದಾಧಿಕಾರಿಗಳಾದ ಆರ್ ಟಿ.ನಾಯ್ಕ ನಡೆಸಿಕೊಟ್ಟರು. ಅದ್ದೂರಿ ವಿಜೃಂಭಣೆಯ ಕಾರ್ಯಕ್ರಮಕ್ಕೆ ನಾಲ್ಕೂರಕ್ಕೂ ಹೆಚ್ಚು ಕಲಾಪ್ರೇಕ್ಷಕರು ಸಾಕ್ಷಿಯಾದರು.