Slide
Slide
Slide
previous arrow
next arrow

ಪೌರ ಕಾರ್ಮಿಕರ ಬಾಳಿನಲ್ಲಿ ಮೂಡಿದ ಹೊಸ ಅಧ್ಯಾಯ

300x250 AD

ನನ್ನ ಮಕ್ಕಳು ಮತ್ತು ಸಂಸಾರವನ್ನು ಇತರೇ ಸರಕಾರಿ ನೌಕರರಂತೆ ಚೆನ್ನಾಗಿ ನೋಡಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು, ಒಳ್ಳೆಯ ಜೀವನ ನಡೆಸಬೇಕು, ಉತ್ತಮ ವೇತನ ಪಡೆಯಬೇಕು ಎಂಬ ನನ್ನ ಎಲ್ಲಾ ಕನಸುಗಳು ಈಗಿನ ಜಿಲ್ಲಾಧಿಕಾರಿ ಬಂದ ಮೇಲೆ ನನಸಾಗಿದೆ ಎನ್ನುವ ಕಾರವಾರ ನಗರಸಭೆಯ ಪೌರಕಾರ್ಮಿಕ ನಾರಾಯಣ್ ಸೇರಿದಂತೆ ಕಾರವಾರ ನಗರಸಭೆಗೆ ಹೊಸದಾಗಿ ನೇಮಕಗೊಂಡ ಎಲ್ಲಾ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಸರಕಾರಿ ನೌಕರರಿಗೆ ನೇಮಕಗೊಂಡವರಿಗೆ ಪ್ರತಿ ತಿಂಗಳು ಸಂಬಳ ಬರುತ್ತದೆ ಎನ್ನುವುದೇನೋ ಸರಿ, ಆದರೆ ವಿವಿಧ ಆಡಳಿತಾತ್ಮಕ ಕಾರಣಗಳಿಂದ ಸೇವೆಗೆ ಸೇರಿದ ಮೊದಲನೇ ತಿಂಗಳ ಸಂಬಳ ಪಡೆಯಲು ಹಲವು ತಿಂಗಳು ಕಾಯಬೇಕಾಗುವುದು ಅಷ್ಟೇ ಸತ್ಯ. ಆದರೆ ಕಾರವಾರ ನಗರಸಭೆಗೆ ಹೊಸದಾಗಿ ನೇಮಕಗೊಂಡ ಪೌರಕಾರ್ಮಿಕರಿಗೆ ನೇಮಕವಾದ ಒಂದೇ ತಿಂಗಳಿಗೆ ಮೊದಲ ತಿಂಗಳ ವೇತನ ದೊರೆಯುವಂತೆ ಮಾಡಿದ ಜಿಲ್ಲಾಧಿಕಾರಿಗಳಿಗೆ, ಮೊದಲ ವೇತನ ಪಡೆದ ಎಲ್ಲಾ ಪೌರಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಿಹಿತಿಂಡಿ ವಿತರಿಸಿ ಅವರಿಗೆ ಧನ್ಯವಾದ ತಿಳಿಸಿದರು.
ಖಾಯಂ ನೌಕರರಾಗುವ ಮೊದಲು ತಾತ್ಕಾಲಿಕ, ಗುತ್ತಿಗೆ, ನೇರ ಪಾವತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಪೌರಕಾರ್ಮಿಕರ ವೇತನ ಅತ್ಯಂತ ಕಡಿಮೆ ಇತ್ತು. ಖಾಯಂ ಆದ ನಂತರ ಪಡೆದ ಮೊದಲ ತಿಂಗಳ ವೇತನ ರೂ.26,185 ಅಲ್ಲದೇ ಪ್ರತೀ ತಿಂಗಳ ಸಂಕಷ್ಠ ಭತ್ಯೆ ರೂ.2000 ಗಳಂತೆ, ಒಂದು ವರ್ಷದ ಸಂಕಷ್ಟ ಭತ್ಯೆಮೊತ್ತವನ್ನು ಒಂದೇ ಬಾರಿಗೆ ರೂ.24,000 ಗಳನ್ನು ಪಾವತಿಸಲಾಗಿದ್ದು, ಇದರಿಂದಾಗಿ ಮೊದಲ ತಿಂಗಳು ಪಡೆದ ಒಟ್ಟು ಮೊತ್ತವೇ ರೂ.50,185 ಆಗಿದೆ. ಒಂದು ತಿಂಗಳಿಗೆ ಇಷ್ಟು ದೊಡ್ಡ ಮೊತ್ತದ ವೇತನ ಪಡೆಯುವುದು ಕನಸೇ ಆಗಿದ್ದ ಈ ಪೌರಕಾರ್ಮಿಕರ ಬಾಳಿನಲ್ಲಿ , ಈ ವೇತನ ಬದುಕಿನಲ್ಲಿ ನೆಮ್ಮದಿ ಹಾಗೂ ಸಂತೃಪ್ತಿಯ ಹೊಸ ಅಧ್ಯಾಯವನ್ನು ತೆರೆದಿದ್ದು, ಅವರು ಕಂಡಿದ್ದ ಎಲ್ಲಾ ಕನಸುಗಳು ನನಸಾಗುವ ಕಾಲ ಕೂಡಿ ಬಂದಿದೆ.
ಮೊದಲ ತಿಂಗಳು ಪಡೆದ ಈ ವೇತನದ ಮೊತ್ತದಲ್ಲಿ ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಿದ್ದೇನೆ. ಇನ್ನು ಮುಂದಿನ ತಿಂಗಳಿನಿಂದ ಬರುವ ವೇತನದಲ್ಲಿ ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡಲು ನಿರ್ಧರಿಸಿದ್ದೇನೆ.ನಮ್ಮನ್ನು ಖಾಯಂ ಆಗಿ ನೇಮಕ ಮಾಡಿದ ನಂತರವೂ ಜಿಲ್ಲಾಧಿಕಾರಿಗಳು ನಮ್ಮ ಬಗ್ಗೆ ಅತ್ಯಂತ ಕಾಳಜಿ ವಹಿಸಿ ನಮಗೆ ಮೊದಲ ತಿಂಗಳ ವೇತನ ಕೊಡಿಸುವವರೆಗೆ ಸದಾ ನಮ್ಮ ಬೆನ್ನುಲೆಬಾಗಿ ನಿಂತಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಹೋಗುವಾಗ ಖಾಲಿ ಕೈಯಲ್ಲಿ ಹೋಗುವುದು ಬೇಡವೆಂದು ಸಿಹಿ ತೆಗೆದುಕೊಂಡು ಹೋಗಿ, ಧನ್ಯವಾದ ಹೇಳಿದ್ದೇವೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ಸಂಬಳದ ಮೊತ್ತವನ್ನು ದುಶ್ಚಟಗಳಿಗೆ ಹಾಳು ಮಾಡಬೇಡಿ, ಕುಟುಂಬದ ಒಳಿತಿಗಾಗಿ ಬಳಸಿ ಎಂದು ಬುದ್ದಿವಾದ ಹೇಳಿದ್ದಾರೆ ಎನ್ನುತ್ತಾರೆ ಪೌರ ಕಾರ್ಮಿಕ ಪ್ರಕಾಶ್.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇದ್ದ 127 ಮಂದಿ ಪೌರ ಕಾರ್ಮಿಕ ಹುದ್ದೆಗಳಿಗೆ, ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರ ಕಾರ್ಮಿರನ್ನು ಖಾಯಂ ಗೊಳಿಸಿ 2024ರ ಮಾರ್ಚ್ ತಿಂಗಳಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದರು.

300x250 AD

ಪೌರ ಕಾರ್ಮಿಕರ ಸೇವೆಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರಉತ್ತಮ ಆರೋಗ್ಯಕ್ಕಾಗಿ , ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿಯುವ ಇವರೇ ನಿಜವಾದ ಶ್ರಮಜೀವಿಗಳು. ಇವರಿಗೆ ಸರ್ಕಾರದಿಂದ ದೊರಯಬೇಕಾದ ಎಲ್ಲಾ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವುದು ಎಲ್ಲರ ಕರ್ತವ್ಯ. ಖಾಯಂಗೊAಡ ಪೌರಕಾರ್ಮಿಕರಿಗೆ ಮೊದಲ ತಿಂಗಳ ವೇತನಕ್ಕೆ ಯಾವುದೇ ಕಾರಣಕ್ಕೂ ಕಾಯಿಸುವುದು ಬೇಡ ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಆದಷ್ಟು ಶೀಘ್ರದಲ್ಲೇ ಅವರಿಗೆ ಮೊದಲನೇ ತಿಂಗಳ ವೇತನ ದೊರೆತಿದೆ. ತಮ್ಮ ಕರ್ತವ್ಯದ ಬಗ್ಗೆ ಹೆಮ್ಮೆ ಪಟ್ಟು, ಶ್ರದ್ದೆಯಿಂದ ಕೆಲಸ ಮಾಡುವಂತೆ ಮತ್ತು ಯಾವುದೇ ರೀತಿಯ ದುರಭ್ಯಾಸಗಳಿಗೆ ಬಲಿಯಾಗದೇ, ನಮ್ಮದಿಯ ಜೀವನ ನಡೆಸುವಂತೆ ಅವರಿಗೆ ತಿಳಿಸಲಾಗಿದೆ : ಗಂಗೂಬಾಯಿ ಮಾನಕರ, ಆಡಳಿತಾಧಿಕಾರಿಗಳು, ಕಾರವಾರ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ.

Share This
300x250 AD
300x250 AD
300x250 AD
Back to top