ಶಿರಸಿ: ಯುವತಿಯ ಫೋಟೋವನ್ನು ಅಶ್ಲೀಲ ವಿಡಿಯೋ ಜೊತೆ ಎಡಿಟ್ ಮಾಡಿ ಶೇರ್ ಮಾಡಿದ್ದ ಶಿರಸಿಯ ಮೂರು ಜನರ ಮೇಲೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆ ಪೋಲಿಸರು ತನಿಖೆ ಕೈಗೊಂಡು ಆರೋಪಿತರಾದ ಬಾಲಚಂದ್ರ ಗೌಡನನ್ನು ಬಂಧಿಸಿದ್ದರು. ಇನ್ನುಳಿದ ಆರೋಪಿತರಾದ ಮಳಲಿಯ ನಾಗವೇಣಿ ಲಕ್ಷ್ಮಣ್ ಗೌಡ ತಲೆಮರಿಸಿಕೊಂಡಿದ್ದು, ಅರ್ಜುನ್ ಅಲಿಯಾಸ್ ಅರುಣ್ ಗೌಡ ಮನೆಯಲ್ಲಿದ್ದು ಈ ವೇಳೆ ನಿನ್ನೆ ಸಂಜೆ ವೇಳೆ ಈತನ ಮನೆಗೆ ತೆರಳಿದ್ದ ಪೊಲೀಸರ ಮೇಲೆ ಕಲ್ಲು ತೂರಿ ತಪ್ಪಿಸಿಕೊಂಡಿದ್ದ. ಇನ್ನು ಆರೋಪಿಗೆ ತಾನು ಬಂಧನವಾಗುವುದು ಖಾತರಿಯಾಗುತ್ತಿದ್ದಂತೆ ಮನೆಯಲ್ಲಿದ್ದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದು ಈ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಈತನನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಈತನ ವಿರುದ್ಧ ಕುಂದಾಪುರ, ಬನವಾಸಿ ಸೇರಿದಂತೆ ಕೆಲವು ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದ್ದು ಶಿರಸಿ ಗ್ರಾಮೀಣ ಠಾಣೆಯಲ್ಲಿ ಸಹ ಪೊಲೀಸರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ.