Slide
Slide
Slide
previous arrow
next arrow

‘ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಸುರಕ್ಷಾ ಕ್ರಮಗಳೊಂದಿಗೆ ಜಲಸಾಹಸ ಚಟುವಟಿಕೆ’

300x250 AD

ಸೂಪಾ ವಾಟರ್ ಅಸೋಸಿಯೇಷನ್‌ನಿಂದ ಪತ್ರಿಕಾಗೋಷ್ಟಿ

ಜೋಯಿಡಾ: ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗಣೇಶಗುಡಿ ಹತ್ತಿರದ ಇಳವಾದಲ್ಲಿ ನಡೆಯುತ್ತಿರುವ ಜಲಸಾಹಸ ಚಟುವಟಿಕೆ (ವಾಟರ್ ಆಕ್ಟಿವಿಟಿಸ್) ಜಿಲ್ಲಾಡಳಿತ ಮತ್ತು ಪ್ರವಾಸೋಧ್ಯಮ ಇಲಾಖೆಯ ಮಾರ್ಗಸೂಚಿಯಂತೆ ನಡೆಯುತ್ತಿದೆ. ಜಲಸಾಹಸ ಚಟುವಟಿಕೆಗೆ(ವಾಟರ್ ಆಕ್ಟಿವಿಟಿಸ್) ಸಂಬಂಧಿಸಿದಂತೆ ಅಗತ್ಯ ಮುಂಜಾಗೃತಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಲಸಾಹಸ ಚಟುವಟಿಕೆಯಲ್ಲಿ ಭಾಗವಹಿಸುವ ಪ್ರವಾಸಿಗರಿಗೆ ಸರಿಯಾದ ಮಾಹಿತಿ, ಮಾರ್ಗದರ್ಶನ ಮತ್ತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ, ಆನಂತರ ಅವರಿಂದ ಒಪ್ಪಿಗೆ ಪತ್ರವನ್ನು ಪಡೆದುಕೊಂಡ ನಂತರವೆ ಜಲಸಾಹಸ ಚಟುವಟಿಕೆಯನ್ನು ಮಾಡಿಸಲಾಗುತ್ತಿದೆ ಎಂದು ಎಂದು ಸೂಪಾ ವಾಟರ್ ಅಸೋಸಿಯೇಷನ್ ಸದಸ್ಯ ಸಂಜಯ ನಂದ್ಯಾಳಕರ ಹೇಳಿದರು.

ಅವರು ಗಣೇಶಗುಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜಲಸಾಹಸ ಚಟುವಟಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸುರಕ್ಷಾ ಲೈಫ್ ಜಾಕೆಟ್‌ಗಳನ್ನು ನೀಡಲಾಗುತ್ತದೆ. ಪ್ರತಿ ತಂಡದಲ್ಲಿ ನುರಿತ ಅನುಭವಿ ಸಿಬ್ಬಂದಿಯನ್ನು‌ ನಿಯೋಜಿಸಿಯೆ ಕಳುಹಿಸಲಾಗುತ್ತದೆ. ಸುರಕ್ಷತೆಗೆ ಮೊದಲ ಆಧ್ಯತೆ ಮತ್ತು ಜಿಲ್ಲಾಡಳಿತದ ನಿಯಾಮವಳಿಗಳನ್ನು ಚಾಚುತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿರುವುದರಿಂದ ಇಂದು ಪ್ರವಾಸೋಧ್ಯಮ ಕ್ಷೇತ್ರ ಪ್ರಗತಿಯಡೆಗೆ ಸಾಗುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಉದ್ಯೋಗದ ಆಸರೆಯಾಗಿದೆ‌ ಎಂದರು.

  ಹಾಗೇಯೇ ಮೇ.24ರಂದು ಗಣೇಶಗುಡಿಯ ರೆಸಾರ್ಟಿಗೆ ಬೆಂಗಳೂರಿನಿಂದ ಬಂದಿದ್ದ ಒಂದೇ ಕುಟುಂಬದ 23 ಸದಸ್ಯರನ್ನೊಳಗೊಂಡ ತಂಡ ಪ್ರವಾಸದ‌ ನಿಮಿತ್ತ ಆಗಮಿಸಿತ್ತು. ಈ ತಂಡದ ಸದಸ್ಯರು ಜಲಸಾಹಸ ಚಟುವಟಿಕೆಯನ್ನು ಮುಗಿಸಿ ಹೊರಗೆ ಬಂದ ನಂತರ ಈ ತಂಡದಲ್ಲಿದ್ದ 59 ವರ್ಷ ವಯಸ್ಸಿನ ಕೃಷ್ಣಮೂರ್ತಿ.ಎಂ.ಜಿ ಅವರಿಗೆ ಉಸಿರಾಟದಲ್ಲಿ‌ ಸಮಸ್ಯೆಯಾಗಿದೆ. ತಕ್ಷಣವೆ ಅವರನ್ನು ವಾಹನದ ಮೂಲಕ ಗಣೇಶ ಗುಡಿಯ ಕೆಪಿಸಿ ನಿಗಮದ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಅಲ್ಲಿಯ ವೈದ್ಯರ ಸೂಚನೆಯಂತೆ ದಾಂಡೇಲಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ವಾಂತಿ ಮಾಡಿಕೊಂಡ‌ ನಂತರ ಶಾಂತವಾಗಿದ್ದರು. ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ, ವೈದ್ಯರು ಕೃಷ್ಣಮೂರ್ತಿ.ಎಂ.ಜಿ ಅವರು ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿರುತ್ತಾರೆ.

ಕೃಷ್ಣಮೂರ್ತಿ.ಎಂ.ಜಿ ಅವರದ್ದು ಸಹಜ ಸಾವೇ ಹೊರತು ಬೇರೆ ಯಾವುದೇ ಕಾರಣವಾಗಿರುವುದಿಲ್ಲ , ಅವರ ಸಾವಿನಲ್ಲಿಯೂ ಯಾವುದೇ ಸಂಶಯವಿರುವುದಿಲ್ಲ ಎನ್ನುವುದನ್ನು ಅವರ ಕುಟುಂಬದ ಸದಸ್ಯರು ಪೊಲೀಸರಿಗೂ ಸ್ಪಷ್ಟ ಮಾಹಿತಿಯನ್ನು ನೀಡಿರುತ್ತಾರೆ.
ಹಾಗಾಗಿ ಜಲಸಾಹಸ ಚಟುವಟಿಕೆಯಿಂದ ಕೃಷ್ಣಮೂರ್ತಿ.ಎಂ.ಜಿ ಅವರು ಮೃತಪಟ್ಟಿರುವುದಿಲ್ಲ ಎನ್ನುವುದನ್ನು ಈ‌ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಜಲಸಾಹಸ ಚಟುವಟಿಕೆಗೆ ತೊಂದರೆ ಕೊಡಬೇಕು, ಪ್ರವಾಸೋದ್ಯಮಕ್ಕೆ ಹಾನಿ ಮಾಡಬೇಕೆಂದು ಇಲ್ಲ ಸಲ್ಲದ ಕಾರಣಗಳನ್ನು ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಯಾರು ನಂಬಬಾರದಾಗಿಯೂ ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

300x250 AD

  ನಾವು ಪ್ರತಿಹಂತದಲ್ಲಿಯೂ ಜಿಲ್ಲಾಡಳಿತ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬರುತ್ತಿದ್ದೇವೆ ಎನ್ನುವುದನ್ನು‌ ಮತ್ತೋಮ್ಮೆ ಈ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದರು.

  ಈ ಸಂದರ್ಭದಲ್ಲಿ ಸೂಪಾ ವಾಟರ್ ಅಸೋಸಿಯೇಷನ್ ಅಧ್ಯಕ್ಷ ಚಾಂದ್ ಕುಟ್ಟಿ ,ಕಾರ್ಯದರ್ಶಿ ಜಿ.ಇ ಸೋಮಶೇಖರ, ಸದಸ್ಯರಾದ ರಾಜೇಶ್ ಶೇಟ್, ಮಹಮ್ಮದ್ ಮೌಲಾನಾ, ಅಲಿ ಶೇಖ್, ಚೇತನ್ ಆರ್ ಕೆ, ಅಪ್ರಿದಿ ಎಸ್, ರಾಜು ರಾಥೋಡ್ ಉಪಸ್ಥಿತರಿದ್ದರು.

 ಅನಾರೋಗ್ಯ ಇದ್ದವರು ಜಲಸಾಹಸ ಕ್ರೀಡೆ ಮಾಡಬಾರದು ಎಂದು ನಾವು ಎಲ್ಲಿರಿಗೂ ಮೊದಲೇ ತಿಳಿಸುತ್ತೇವೆ, ಪ್ರವಾಸಿಗರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಬೇರೆಯವರಿಗೆ ಬೇಸರವಾಗುತ್ತದೆ ಎನ್ನುವ ದೃಷ್ಟಿಯಿಂದ ಜಲಸಾಹಸ ಕ್ರೀಡೆ ಮಾಡಬೇಡಿ.ಅನಾರೋಗ್ಯ ಇದ್ದವರು ನೀರಿಗಿಳಿದರೆ ಅದು ನಮ್ಮ ಜವಾಬ್ದಾರಿ ಅಲ್ಲ.- ಚಾಂದ ಕುಟ್ಟಿ, ಅಧ್ಯಕ್ಷರು ಸೂಪಾ ವಾಟರ್ ಅಸೋಸಿಯೇಶನ್

Share This
300x250 AD
300x250 AD
300x250 AD
Back to top