ಶಿರಸಿ: ಇಲ್ಲಿನ ಟಿಎಸ್ಎಸ್ ಗೆ ಆಡಳಿತದಲ್ಲಿದ್ದ ಸದಸ್ಯ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಿ ವಿಶೇಷ ಅಧಿಕಾರಿಯನ್ನು ನೇಮಿಸಿದ ಕೋರ್ಟ್ ತೀರ್ಪನ್ನು ವಿರೋಧಿಸಿ, ಸರಕಾರದ ಹಸ್ತಕ್ಷೇಪಗಳು ಸಹಕಾರಿ ವಲಯದಲ್ಲಿ ಇರಬಾರದು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಮೇ.28, ಮಂಗಳವಾರ ಶಿರಸಿಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10.30 ಕ್ಕೆ ಟಿಎಸ್ಎಸ್ ಸಂಸ್ಥೆಯ ಪ್ರಧಾನ ಕಛೇರಿಯಿಂದ ಪ್ರತಿಭಟನಾ ಜಾಥಾ ಆರಂಭಿಸಿ, ಮೆರವಣಿಗೆಯ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿದ್ದಾರೆ. ರಾಜ್ಯ ಸರಕಾರದ ಸಹಕಾರಿ ಇಲಾಖೆಯ ದುರಾಡಳಿತವನ್ನು ವಿರೋಧಿಸಲು ನಡೆಯುವ ಈ ಪ್ರತಿಭಟನೆಯಲ್ಲಿ ಟಿಎಸ್ಎಸ್ ಶೇರು ಸದಸ್ಯರು, ಹಿತೈಷಿಗಳು, ಸಹಕಾರಿ ವಲಯದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಿರಿಯ ಸಹಕಾರಿಗಳಾಗಿರುವ ಗೋಪಾಲಕೃಷ್ಣ ವೈದ್ಯ, ಎಂ.ಎನ್ ಭಟ್ಟ ತೋಟಿಮನೆ ವಿನಂತಿಸಿಕೊಂಡಿದ್ದಾರೆ.