ಜೊಯಿಡಾ: ತಾಲೂಕಿನಲ್ಲಿ ಶಿಕ್ಷಣಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಇಲಾಖೆ ತಕ್ಕ ಮಟ್ಟಿಗೆ ನಿರ್ವಹಿಸಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳು, ಬಿಸಿಯೂಟ ಶಾಲಾ ಕಟ್ಟಡಗಳು ಶಿಕ್ಷಕರು ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಮಾಡಿ ಕೊಟ್ಟಿದೆ. ಆದರೆ ತಾಲೂಕಿನಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ ಪ್ರಾಥಮಿಕ ಹಂತದಿಂದಲೇ ಹಲವಾರು ವಿದ್ಯಾರ್ಥಿಗಳನ್ನು ಪಾಲಕರು ಬೇರೆ ತಾಲ್ಲೂಕುಗಳಿಗೆ ಕಳಿಸುತ್ತಿದ್ದಾರೆ.
ಅದರಲ್ಲೂ ಕಾರವಾರದ ಸಿದ್ದರ, ಅಸ್ನೋಟಿ, ಹಳಗಾ, ಕೆರವಾಡ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳನ್ನು ಅಲ್ಲಿನ ಸಂಘಟಕರು ಒತ್ತಾಯಪೂರ್ವಕ ಒಯ್ಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೊರ ತಾಲೂಕಿಗೆ ಹೋಗಿರುವ ವಿದ್ಯಾರ್ಥಿಗಳೆಲ್ಲ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಕೆಲವರು ಕಾಟಾಚಾರಕ್ಕೆ ಒಮ್ಮೆ ಸೇರಿದರೆ ತಿಂಗಳುಗಳ ಕಾಲ ಊರಿಗೆ ಬಂದವರು ಹೋಗುವುದೇ ಇಲ್ಲವಂತೆ. ಚಿಕ್ಕ ಚಿಕ್ಕ ಮಕ್ಕಳು ತಾಲ್ಲೂಕಿನಿಂದ ಬೇರೆ ಕಡೆ ಹೋದಾಗ ಅಲ್ಲಿನ ವ್ಯವಸ್ಥೆಗಳು ಸರಿ ಬಾರದೆ ಇದ್ದಾಗ ಮತ್ತೆ ಅತ್ತ ಹೋಗುವುದೇ ಇಲ್ಲದಂತಾಗಿದೆ. ತಾಲೂಕಿನ ಶಿಕ್ಷಣ ಇಲಾಖೆ ಅವರ ಮಾಹಿತಿ ಸಿಗದೇ ವಿದ್ಯಾರ್ಥಿಗಳು ಪೊಲಿ ಓಡಾಡಿಕೊಂಡಿದ್ದರು ಏನು ಮಾಡಲು ಸಾಧ್ಯವಾಗುತ್ತಿಲ್ಲ. ಕೇಳಿದರೆ ಅವರು ಸೇರಿದ ಶಾಲೆಯ ಹೆಸರನ್ನು ಹೇಳಿ ಜಾರಿ ಕೊಳ್ಳುತ್ತಾರೆ. ಇಂಥ ಹಲವು ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಯಾರಿಗೂ ಬೇರೆ ತಾಲೂಕು ಬೇಡವಾಗಿದೆ. ಕೆಲವರು ಬಂದು ಅಪ್ಪ ಅಮ್ಮನೊಂದಿಗೆ ವ್ಯವಹರಿಸಿ ಚಿಕ್ಕ ಮಕ್ಕಳ ದಾಖಲೆಗಳನ್ನೂ ಒಯ್ದು ತರುತ್ತಾರೆ ಎಂದು ಹೇಳಲಾಗುತ್ತಿದೆ.
ನಮ್ಮ ಶಾಲೆಗೆ ಶಿಕ್ಷಕರು ಬೇಕು, ನಮ್ಮ ಶಾಲೆಗೆ ಕೊಠಡಿ ಬೇಕು ಎಂದು ಪ್ರತಿಭಟನೆ ಮಾಡುವ ಕೆಲವು ಸ್ಥಳೀಯರು ನಮ್ಮ ಮಕ್ಕಳು ನಮ್ಮ ಊರಿನಲ್ಲಿ ತಾಲೂಕಿನಲ್ಲಿಯೇ ಕಲಿಯಲಿ ಎಂದು ವಿಚಾರ ಮಾಡಿ ವಿದ್ಯಾರ್ಥಿಗಳನ್ನು ಚಿಕ್ಕವರಿರುವಾಗ ತಾಲುಕಿನಲ್ಲಿಯೇ ಶಿಕ್ಷಣ ಕೊಡಿಸುವುದು ಒಳಿತು. ಹೊರ ತಾಲೂಕಿಗೆ ಹೋದ ವಿದ್ಯಾರ್ಥಿಗಳಿಗೆ ಸರಕಾರದ ಸೈಕಲ್ ಕೂಡ ಹಿಂದೆ ದೊರೆತಿಲ್ಲವಂತೆ. ಹೀಗೆ ನೂರಾರು ವಿದ್ಯಾರ್ಥಿಗಳ ಸ್ಥಿತಿಯಾಗಿದೆ.
ನಮ್ಮ ಮನೆಯ ನಾಲ್ಕು ಮಕ್ಕಳನ್ನು ಕಾರವಾರಕ್ಕೆ ಕಳಿಸಿದ್ದಾರೆ. ನಾವೇನು ಮಾಡಬೇಕು ನಮಗೆ ತಾಲೂಕಿನಲ್ಲಿ ಇರುವ ಆಸೆ. – ಹೆಸರು ಹೇಳದ ವಿದ್ಯಾರ್ಥಿ