Slide
Slide
Slide
previous arrow
next arrow

ಮೇ.19ಕ್ಕೆ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ವಾರ್ಷಿಕೋತ್ಸವ: ಯಕ್ಷಗಾನ ಪ್ರದರ್ಶನ

300x250 AD

ಶಿರಸಿ: ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ರಿ. ಶಿರಸಿ ಇದರ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ, ಯಕ್ಷಗಾನ ನೃತ್ಯರೂಪಕ ಮತ್ತು ಶ್ರೀ ಯಕ್ಷಗಾನ ಕಲಾಮೇಳ ಶಿರಸಿ ಇದರ ಕಲಾವಿದರಿಂದ ‘ಅಂಗದ ಸಂಧಾನ’ ಎಂಬ ಯಕ್ಷಗಾನ ಪ್ರದರ್ಶನವನ್ನು ಮೇ 19, ಭಾನುವಾರರಂದು ಸಂಜೆ 4-30 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ರಂಗಧಾಮ ನೆಮ್ಮದಿ ಆವರಣ ಶಿರಸಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಯಕ್ಷಗಾನದ ಪ್ರಸಂಗ “ಅಂಗದ ಸಂಧಾನ” ಹೊಸ ಪರಿಕಲ್ಪನೆಯೊಂದಿಗೆ, ಇದರ ಮೊದಲ ಪ್ರದರ್ಶನ ಇದಾಗಿದೆ. ಯಕ್ಷಗಾನ ನೃತ್ಯರೂಪಕ ಸಂಜೆ 4-30 ಗಂಟೆಗೆ ಸರಿಯಾಗಿ, ಬಾಲಕಲಾವಿದ ಕುಮಾರ ಆರುಷ್ ಶೆಟ್ಟಿ ಮಂಗಳೂರು ಇವರಿಂದ ಪ್ರಸ್ತುತಗೊಳ್ಳಲಿದೆ. ಸನ್ಮಾನ ಕಾರ್ಯಕ್ರಮ ಸಂಜೆ 5-00 ಗಂಟೆಗೆ ನಡೆಯಲಿಕ್ಕಿದೆ. ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಸನ್ಮಾನ ನಡೆಯಲಿದ್ದು, ನಂತರ “ಅಂಗದ ಸಂಧಾನ” ಹೊಸಪರಿಕಲ್ಪನೆಯಲ್ಲಿ ಮೂಡಿಬಂದ ಯಕ್ಷಗಾನ ಪ್ರಸಂಗ ಕೃತಿಯ ಲೋಕಾರ್ಪಣೆ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಟಿಎಮ್ಎಸ್‌ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ನೆರವೇರಿಸಲಿದ್ದಾರೆ.ಸಭಾಧ್ಯಕ್ಷತೆಯನ್ನು ಅಶೋಕ ಹಾಸ್ಯಗಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನಂತಮೂರ್ತಿ ಹೆಗಡೆ, ಕದಂಬ ಸೌಹಾರ್ಧ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ ಮತ್ತು ಹಾಲು ಉತ್ಪಾದಕರ ಒಕ್ಕೂಟ ಧಾರವಾಡ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪಾಲ್ಗೊಳ್ಳಲಿದ್ದಾರೆ. ಪ್ರಾಸ್ತಾವಿಕ ನುಡಿ ಮತ್ತು ಎಲ್ಲರನ್ನೂ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ರಿ. ಅಧ್ಯಕ್ಷ ಕೇಶವ ಹೆಗಡೆ ನಾಗರಕುರ ಸ್ವಾಗತಿಸಲಿದ್ದಾರೆ.

300x250 AD

ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆಯಲ್ಲಿ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ, ರಾವಣದಲ್ಲಿ ಸಂಜಯ ಬೆಳೆಯೂರು, ಅಂಗದನಾಗಿ ಶಂಕರ ಭಟ್( ನಾಟ್ಯಾಚಾರ್ಯ) ಸಿದ್ದಾಪುರ, ರಾಮನಾಗಿ ತಿಮ್ಮಪ್ಪ ಹೆಗಡೆ ಶಿರಳಗಿ, ಪ್ರಹಸ್ತನಾಗಿ ಮಹಾಬಲೇಶ್ವರ ಗೌಡ ಹಾರೇಕೊಪ್ಪ, ಸುಗ್ರೀವನಾಗಿ ಮಂಜುನಾಥ ಹಿಲ್ಲೂರು, ಲಕ್ಷ್ಮಣನಾಗಿ ಅಕ್ಷಯ ಗೌಡ ಮತ್ತು ಹಾಸ್ಯ ಪಾತ್ರದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ ಮನರಂಜಿಸಲಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾಗಲು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top