Slide
Slide
Slide
previous arrow
next arrow

ಗಿಳಿಗುಂಡಿಯಲ್ಲಿ ಮನಸೂರೆಗೊಂಡ ‘ನಾದಸಿರಿ’

300x250 AD

ಅಂತರರಾಷ್ಟ್ರೀಯ ಕಲಾವಿದರ ಗಾಯನಕ್ಕೆ ತಲೆದೂಗಿದ ಸಂಗೀತಾಸಕ್ತರು

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ಆಯೋಜಿಸಿದ “ನಾದಸಿರಿ -೨೦೨೪” ದಶಮಾನೋತ್ಸವದ ರಾಗಸಂಗೀತೋತ್ಸವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮೇ ೧೧ ರಂದು ಗಿಳಿಗುಂಡಿಯ “ವೆಂಕಟೇಶ ನಿಲಯದ” ಮನೆಯಂಗಳದಲ್ಲಿ ನೆರವೇರಿತು ಟ್ರಸ್ಟಿನ ಗೌರವಾಧ್ಯಕ್ಷರಾದ ಎಂ.ಕೆ.ಹೆಗಡೆ, ಅಧ್ಯಕ್ಷರಾದ ರಾಜಾರಾಮ ಹೆಗಡೆ, ಅಂತರರಾಷ್ಟ್ರೀಯ ಪ್ರಸಿದ್ಧ ಗಾಯಕರಾದ ಪಂಡಿತಾ ಶುಭದಾ ಪರಾಡ್ಕರ್ ಹಾಗೂ ಟ್ರಸ್ಟ ಇತರ ಸದಸ್ಯರು ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

300x250 AD

ಕಾರ್ಯಕ್ರಮವು ಬೆಳಿಗ್ಗೆ ೮ ಗಂಟೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುಮಾರಿ ಸಂಗೀತಾ ಹೆಗಡೆಯವರು ರಾಗ್ ತೋಡಿಯನ್ನು ಪ್ರಸ್ತುತ ಪಡಿಸಿದರು. ಇವರೊಂದಿಗೆ ಸಹ ಕಲಾವಿದರಾಗಿ ತಬಲದಲ್ಲಿ ಕೇಶವ ಜೋಶಿ ಹಾಗೂ ಸಂವಾದಿನಿಯಲ್ಲಿ ಸತೀಶ್ ಭಟ್ ಹೆಗ್ಗಾರ ಸಹಕರಿಸಿದರು. ನಂತರದಲ್ಲಿ ಮುಂಬೈಯ ಪ್ರಸಿದ್ಧ ಗಾಯಕರಾದ ಪಂಡಿತಾ ಶುಭದಾ ಪರಾಡ್ಕರ್ ಇವರು ತಮ್ಮ ಗಾಯನವನ್ನು ರಾಗ ಕೋಮ ರಿಷಭ ಅಸಾವರಿಯೊಂದಿಗೆ ಪ್ರಾರಂಭಿಸಿ ನಂತರ ಅವರೇ ರಚಿಸಿದ ರಾಗ “ಆನಂದ ಭಟಿಯಾರ್” ರಾಗವನ್ನು ಹಾಡಿ ನಂತರ ಗ್ವಾಲಿಯರ್ ಶೈಲಿಯ “ಟಪ್ ಖ್ಯಾಲ್” ಪ್ರಕಾರದ ಬಂದೀಶನ್ನು ರಾಗ ಅಲೆಯ್ಯಾ ಬಿಲಾವಲ್‌ದಲ್ಲಿ ಹಾಡಿ ಸಂಗೀತ ಸಂಚಲನ ಮೂಡಿಸಿದರು.
ತದ ನಂತರ ಕಿರಣಾ ಗ್ವಾಲಿಯರ್ ಘರಾಣೆಯ ಪ್ರಸಿದ್ಧ ಗಾಯಕರಾದ ಪದ್ಮಶ್ರೀ ಪಂ.ಎಂ. ವೆಂಕಟೇಶ್ ಕುಮಾರ್ ಅವರು ರಾಗ “ಜಾನ್ ಪುರಿ” ರಾಗ ಬೃಂದಾವನಿಸಾರಂಗ” ಮತ್ತು “ರಾಗ್ ಪಟದೀಪ್”ನ್ನು ಹಾಡಿ ನಂತರ ವಚನ ಮತ್ತು ದಾಸರ ಪದವನ್ನು ಹಾಡಿ ಜನರನ್ನು ಸಂತೋಷಪಡಿಸಿದರು.
ಕಾರ್ಯಕ್ರಮದ ದ್ವಿತೀಯ ಹಂತವು ೪.೩೦ ಘಂಟೆಗೆ ಪ್ರಾರಂಭಗೊಂಡು ಗೋವಾದ ಡಾ|| ಶಶಾಂಕ್ ಮುಕ್ತೇಧಾರ್ ರಾಗ ಮುಲ್ತಾನಿ ಮತ್ತು ರಾಗ ಮೂರವಾದೊಂದಿಗೆ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು.
ನಂತರದಲ್ಲಿ ಅಂತರಾಷ್ಟ್ರೀಯ ಕಲಾವಿದರಾದ ತಬಲಾ ದಿಗ್ಗಜರೆನಿಸಿಕೊಂಡಿರುವ ಪಂ. ಯೋಗೇಶ್ ಸಂ.ಶಿ ಇವರಿಂದ ತಬಲಾ ಸ್ವತಂತ್ರ್ಯ ವಾದನವು ಜನರನ್ನು ಮಂತ್ರ ಮುಗ್ದಗೊಳಿಸಿತು. ಕಾರ್ಯಕ್ರಮದ ತೃತೀಯ ಹಂತವು ರಾತ್ರಿ ೯.೦೦ ಘಂಟೆಗೆ ಪ್ರಾರಂಭಗೊಂಡಿತು. ಮೊದಲು ಜೈಪುರ್, ಅತ್ರೌಲಿ ಘರಾಣೆಯ ದೇಶದ ಪ್ರಸಿದ್ಧ ಗಾಯಕರಾದ ಡಾ|| ಅಶ್ವಿನಿ ಬಿಡೆ ದೇಶಪಾಂಡೆ ರಾಗ್ ಖೇಮ್ ಕಲ್ಯಾಣ್ ಹಾಗೂ ಕಾಫಿ ಕಾನ್ಹಾಡಾ ಹಾಗೂ “ಬಿಹಾಗಡಾ” ರಾಗವನ್ನು ಪ್ರಸ್ತುತ ಪಡಿಸಿದರು. ಜನರ ಮನ ತಣಿಸಿದರು.
ಕೊನೆಯಲ್ಲಿ ದೇಶದ ಶ್ರೇಷ್ಠ ಗಾಯಕರೆನಿಸಿಕೊಂಡಿರುವ ಪಂ. ಉಲ್ಲಾಸ್ ಕಶಾಲ್ಕರ್ ಇವರಿಂದ ಗಾಯನ ಕಾರ್ಯಕ್ರಮವು ನಡೆಯಿತು. ಇವರು ರಾಗ್ ಕೌಂಶಿ ಕಾನ್ಹಾಡಾದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ ರಾಗ್ “ಪರಾಜ್” ಹಾಗೂ ರಾಗ್ “ದೇಶ್”ನ್ನು ಪ್ರಸ್ತುತ ಪಡಿಸಿದರು. ನಂತರದಲ್ಲಿ ಭೈರವಿಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂಗೀತ ಸಮ್ಮೇಳನದಲ್ಲಿ ತಬಲಾ ಸಾಥಿ ಕಲಾವಿದರಾಗಿ ಶ್ರೀಯತಿ ಭಾಗ್ವತ್, ಮುಂಬೈ, ಕೇಶವ್ ಜೋಶಿಯವರು ಸಹಕರಿಸಿದರು. ಭರತ್ ಹೆಗಡೆ, ಹೆಬ್ಬಲಸು, ಸತೀಶ್ ಭಟ್, ಹೆಗ್ಗಾರ್ ಹಾಗೂ ಗುರುಪ್ರಸಾದ್ ಹೆಗಡೆಯವರು ಸಂವಾದಿನಿಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ತೇಜಸ್ವಿ ಶಂಕರ್ ಹಾಗೂ ಶ್ರೀಮತಿ ವಸುಧಾ ಮುದಿಗೌಡರ್ ನಡೆಸಿಕೊಟ್ಟರು.
ಒಂದೇ ವೇದಿಕೆಯಲ್ಲಿ ಇಂತಹ ದಿಗ್ಗಜ ಕಲಾವಿದರುಗಳನ್ನು ಒಗ್ಗೂಡಿಸುವುದು ಬಹಳ ಅಪರೂಪವೆಂದು ಅಲ್ಲಿ ನೆರೆದಿದ್ದ ಜನರು ವ್ಯಕ್ತಪಡಿಸಿದರು.

Share This
300x250 AD
300x250 AD
300x250 AD
Back to top