Slide
Slide
Slide
previous arrow
next arrow

ಯಶಸ್ವಿಯಾದ “ನಮ್ಮ ಆಸ್ಪತ್ರೆ”ಯ ಮಾಹಿತಿ ಕಾರ್ಯಾಗಾರ

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್‌ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಙಾನ ಸಂಸ್ಥೆ (ಟಿಎಸ್‌ಎಸ್ ಆಸ್ಪತ್ರೆ)ಯಲ್ಲಿ ಮೇ.13ರಂದು ಸ್ಥಳೀಯ ಸಹಕಾರ ಸಂಘಗಳೊಂದಿಗೆ ‘ನಮ್ಮ ಆಸ್ಪತ್ರೆ’ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ, 35ಕ್ಕೂ ಹೆಚ್ಚು ಸ್ಥಳೀಯ (ಶಿರಸಿ, ಸಿದ್ದಾಪುರ, ಯಲ್ಲಾಪುರ) ಸಹಕಾರಿ ಸಂಘಗಳು ಪಾಲ್ಗೊಂಡಿದ್ದವು. ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯಗಳು, ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಯಿತು. ಮಂಗಳಮಯವಾದ ದೀಪ ಬೆಳಗುವುದರ ಮೂಲಕ ಆರಂಭವಾದ ಈ ಕಾರ್ಯಾಗಾರವು, ಸತತ ಮೂರು ಘಂಟೆಗೂ ಅಧಿಕ ಕಾಲ ನಡೆಯಿತು.
ಆರಂಭದಲ್ಲಿ. ಸಭಾಧ್ಯಕ್ಷರೂ, ಟಿಎಸ್‌ಎಸ್ ಆಸ್ಪತ್ರೆಯ ಅಧ್ಯಕ್ಷರೂ ಆದಂತಹ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮದ ಆಯೋಜನೆಯ ಸದುದ್ದೇಶವನ್ನು ತಿಳಿಸಿದರು. ನಂತರ ಸಂಸ್ಥೆಯ ಹಿರಿಯ ವೈದ್ಯಕೀಯ ಅಧೀಕ್ಷಕರಾದ ಡಾ. ವಿಕಾಸ್ ಹೆಗಡೆ ಆಸ್ಪತ್ರೆಯ ಆರಂಭದ ಉದ್ದೇಶ, ನಡೆದು ಬಂದ ಹಾದಿ, ಪ್ರಸ್ತುತ ವಿದ್ಯಮಾನದಲ್ಲಿ ಸಡೆಯುತ್ತಿರುವ ರೀತಿಗಳನ್ನು ಸ್ಥೂಲವಾಗಿ ವಿವರಿಸಿದರು. ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ತಜ್ಞ ವೈದ್ಯರು ತಮ್ಮ ತಮ್ಮ ವಿಭಾಗದಲ್ಲಿ ಲಭ್ಯವಿರುವ ಆಧುನಿಕ ಸೇವೆಯ ಬಗ್ಗೆ ಸ್ವತಃ ತಾವೇ ವಿವರಿಸಿ ಜನರಲ್ಲಿದ್ದ ಗೊಂದಲಗಳನ್ನು ನಿವಾರಿಸಿದರು.
ಸರಕಾರದ ಆಯುಷ್ಮಾನ್ ಭಾರತ್ ಯೋಜನೆ, ಜನ ಸ್ನೇಹಿ ರೈತ ರಕ್ಷಾ ಕವಚ ಯೋಜನೆ, ಮಂಡಿಚಿಪ್ಪು ಬದಲಾವಣೆ, ಇಪ್ಪತ್ನಾಲ್ಕು ಘಂಟೆ ಲಭ್ಯವಿರುವ, ತುರ್ತು ಚಿಕಿತಾ ವಿಭಾಗ, ಪ್ರಯೋಗಾಲಯ, ಔಷಧಾಲಯ, ರೀಡಿಯೋಲಜಿ ವಿಭಾಗ, ಅಪಘಾತದಲ್ಲಿ ಉಂಟಾದ ಹಲ್ಲು ದವಡೆಗಳಿಗೆ ಸಂಬಂಧಿಸಿದ ಯಾವುದೇ ಶಸ್ತ್ರ ಚಿಕಿತ್ಸೆ, ಯಾವುದೇ ಶಸ್ತ್ರಚಿಕಿತ್ಸೆಗೆ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರ ಚಿಕಿತ್ಸಾ ವಿಭಾಗ, ನವಜಾತ ಶಿಶುಗಳ ಚಿಕಿತ್ಸೆಗೆ ಅಗತ್ಯವಾದ ಯಂತ್ರೋಪಕರಣಗಳ ಸೌಲಭ್ಯ, ಚರ್ಮಕ್ಕೆ ಸಂಬಂಧಿಸಿದ ರೋಗಗಳ ಆಧುನಿಕ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ, ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆ ಹಾಗೂ ವೈದ್ಯಕೀಯ ಕಾನೂನ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಯಿತು.
ಕಾರ್ಯಾಗಾರದ ಮುಖ್ಯಘಟ್ಟವಾದ ಸಮಾಲೋಚನೆಯಲ್ಲಿ ಸಹಕಾರ ಸಂಘಗಳ ಉತ್ತಮ ರೀತಿಯ ಪಾಲ್ಗೊಳ್ಳುವಿಕೆಯು ಕಾರ್ಯಾಗಾರದ ಯಶಸ್ಸನ್ನು ಪ್ರತಿಬಿಂಬಿಸುತ್ತಿತ್ತು. ಸುಮಾರು ಒಂದೂವರೆ ಘಂಟೆಗಳ ಕಾಲ ನಡೆದ ಸುದೀರ್ಘ ಸಂವಾದದಲ್ಲಿ ಸಹಕಾರ ಸಂಘಗಳು ಪ್ರಶ್ನೆಗಳನ್ನು ಕೇಳಿ ಸಮರ್ಪಕ ಹಾಗೂ ಸಂಪೂರ್ಣ ವಿವರಗಳನ್ನು ಪಡೆದುಕೊಂಡು, ತಮ್ಮನ್ನು ಅವಲಂಬಿಸಿದ ಸರ್ವ ಸದಸ್ಯರ ಆರೋಗ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟರು. ಶಿರಸಿ ಟಿ.ಎಂ.ಎಸ್ ಸಂಸ್ಥೆಯ ಅಧ್ಯಕ್ಷರಾದ, ಹಿರಿಯರಾದ, ಜಿ.ಟಿ ಹೆಗಡೆ ಅವರು ಆಸ್ಪತ್ರೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು. ಕಾರ್ಯಾಗಾರದಲ್ಲಿ ಆಗಮಿಸಿದ ಜನರು, ಸ್ವತಃ ತಮಗೆ ಆದ ಸಿಹಿ/ಕಹಿ ಘಟನೆಗಳನ್ನು ಹಂಚಿಕೊಂಡರು. ಆಸ್ಪತ್ರೆಯು ತನ್ನ ಸೇವೆಯನು ಉನ್ನತ ದರ್ಜೆಗೆ ಏರಿಸಿಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಈ ಕಾರ್ಯಾಗಾರವನ್ನು ಶ್ಲಾಘಿಸಿದರು. ತಮ್ಮ ತಮ್ಮ ಸದಸ್ಯರ ಹಿತಕ್ಕಾಗಿ ತಾವೂ ಸಹ ಆಸ್ಪತ್ರೆಯೊಂದಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಜನರ ನೆಚ್ಚಿನ “ನಮ್ಮ ಆಸ್ಪತ್ರೆ” ಹಾಗೂ ಸ್ಥಳಿಯ ಸಹಕಾರ ಸಂಘಗಳ ಮಾಹಿತಿ ಕಾರ್ಯಾಗಾರವು ಯಶಸ್ವಿಯಾಯಿತು. ಕಾರ್ಯಾಗಾರದಲ್ಲಿ, ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಧರ್ಮದರ್ಶಿಗಳು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top