ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನವು ಸ್ವರ್ಣವಲ್ಲೀ ಶ್ರೀಗಳವರ 33ನೇ ಪೀಠಾರೋಹಣದ ಅಂಗವಾಗಿ ಪ್ರತಿ ತಿಂಗಳ ಮೊದಲ ಸೋಮವಾರ ಸಂಘಟಿಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮವು ಏ. 1 ಸೋಮವಾರ ಇಳಿಹೊತ್ತು 5.30 ರಿಂದ ನಡೆಯಲಿದೆ.
ಆರಂಭಿಕವಾಗಿ ರಾಗಮಿತ್ರ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ನಡೆಯಲಿದ್ದು ನಂತರದಲ್ಲಿ ಅಂಜನಾ ಹೆಗಡೆ ಶಿರಸಿ ಇವರಿಂದ ಹಾರ್ಮೋನಿಯಂ ಸೋಲೋ ನಡೆಯಲಿದ್ದು ಈ ಸಂದರ್ಭದಲ್ಲಿ ಕಿರಣ ಕಾನಗೋಡ್ ತಬಲಾದಲ್ಲಿ ಸಹಕರಿಸಲಿದ್ದಾರೆ. ತದನಂತರದಲ್ಲಿ ಗಾಯಕಿ ಸ್ಮಿತಾ ಹೆಗಡೆ ಕುಂಟೆಮನೆಯವರಿಂದ ಗಾಯನ ನಡೆಯಲಿದ್ದು ತಬಲಾದಲ್ಲಿ ಶಂಕರ ಹೆಗಡೆ ಹಿರೇಮಕ್ಕಿ, ಆನಂದ ಭಟ್ಟ ದಾಯಿಮನೆ ಮತ್ತು ಹಾರ್ಮೋನಿಯಂನಲ್ಲಿ ಗೌರೀಶ ಯಾಜಿ ಕೂಜಳ್ಳಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೌರವ ಸನ್ಮಾನವನ್ನು ಹಾರ್ಮೋನಿಯಂ ವಾದಕ ಗೌರೀಶ ಯಾಜಿಯವರಿಗೆ ಹಾಗೂ ಸ್ಮಿತಾ ಕುಂಟೆಮನೆಯವರಿಗೆ ನೆರವೇರಿಸಲಿದ್ದು ಸಮಾಜ ಸೇವಕ ಮಾಧವ ಪುಟ್ಟಣ್ಣ ಕೋಟೆಮನೆ ಹಲವಳ್ಳಿಯವರು ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಆರ್. ಎನ್. ಭಟ್ಟ ಸುಗಾವಿ, ವೇದಿಕೆಯಲ್ಲಿ ಎಂ. ಎನ್. ಹೆಗಡೆ ಮಾಳೇನಳ್ಳಿ ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕ ಪ್ರಕಾಶ ಹೆಗಡೆ ಯಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.