ಶಿರಸಿ: ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಾರ್ಚ 28,ಗುರವಾರದಂದು ಕುಮಟಾದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಬೃಹತ್ ಅರಣ್ಯವಾಸಿಗಳ ಸಭೆಯನ್ನ ಮುಂದೂಡಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ೩೩ ವರ್ಷ ಅರಣ್ಯವಾಸಿಗಳ ಪರವಾಗಿ ಭೂಮಿ ಹಕ್ಕು, ಅರಣ್ಯವಾಸಿಗಳ ದೌರ್ಜನ್ಯ, ಹೋರಾಟ, ಸಂಘಟನೆ, ಅರಣ್ಯವಾಸಿಗಳ ಪರವಾಗಿ ನ್ಯೂಡೆಲ್ಲಿಯಲ್ಲಿ ಪ್ರಕರಣ ಮುಂತಾದ ವಿವಿಧ ರೀತಿಯ ಅರಣ್ಯವಾಸಿಗಳ ಪರವಾದ ಕಾರ್ಯ ಜರುಗಿಸುವ ಹಿನ್ನೆಲೆಯಲ್ಲಿ ಚರ್ಚಿಸಿ ಲೋಕಸಭೆ ಚುನಾವಣೆಯಲ್ಲಿ ಅರಣ್ಯವಾಸಿಗಳ ನಿರ್ಧಾರ ಪ್ರಕಟಿಸುವ ಉದ್ದೇಶದಿಂದ ಕುಮಟಾದಲ್ಲಿ ಮಾರ್ಚ ೨೮ ರಂದು ಸಭೆ ಕರೆಯಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತೀ ಶೀಘ್ರದಲ್ಲಿ ಮುಂದಿನ ಸಭೆಯ ದಿನಾಂಕವನ್ನು ಪ್ರಕಟಿಸಲಾಗುವುದೆಂದು ರವೀಂದ್ರ ನಾಯ್ಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.