ಬನವಾಸಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.70 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಮಂಗಳವಾರ ಯಡೂರಬೈಲ್ ಚೆಕ್ಪೋಸ್ಟ್ನಲ್ಲಿ ಜಪ್ತಿ ಮಾಡಿದ್ದಾರೆ.
ಸೊರಬ ತಾಲ್ಲೂಕಿನ ಪುಟ್ನಳ್ಳಿ ಗ್ರಾಮದ ರೇಣುಕಾ ನಾಗರಾಜ ದೊಡ್ಮನಿ ಎಂಬುವವರ 1.50ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದು, ಮಗಳ ಮದುವೆಗೆ ಬಂಗಾರ ಖರೀದಿಸಲು ಶಿರಸಿಗೆ ಹಣ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಶಿರಸಿಯಿಂದ ಹಿರೇಕೆರೂರು ಸಾಗುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕನಟ್ಟಿ ಗ್ರಾಮದ ಪರಶುರಾಮ ಯಲ್ಲಪ್ಪ ಎಂಬುವವರು ದಾಖಲೆಯಿಲ್ಲದೇ ಸಾಗಿಸುತ್ತಿದ್ದ 5.20ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಉದ್ಯಮಕ್ಕೆ ಸಂಬಂಧಿಸಿದ ಹಣ ಎಂದು ತಿಳಿದುಬಂದಿದೆ. ಎರಡು ಪ್ರಕರಣಗಳಲ್ಲಿ ಹಣದ ದಾಖಲೆಯನ್ನು ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.