ಯಲ್ಲಾಪುರ: ತಾಲೂಕಿನ ಒಳ್ಳೆಸರದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಗೋರ್ಸಗದ್ದೆ ಇವರ ಆಶ್ರಯದಲ್ಲಿ ಶ್ರೀ ವರ ಸಿದ್ಧಿವಿನಾಯಕ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಶನಿವಾರ ರಾತ್ರಿ ನಡೆಯಿತು.
ಶ್ರೀ ವರಸಿದ್ಧಿವಿನಾಯಕ ವಾರಿಯರ್ಸ್ ಗೋರ್ಸಗದ್ದೆ ಫ್ರಾಂಚೈಸಿಯ ಮಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಆಕರ್ಷಕ ಟ್ರೋಫಿ ಮತ್ತು 25000 ಸಾವಿರ ಹಣ ತನ್ನದಾಗಿಸಿಕೊಂಡಿತು. ಶ್ರೀ ಸಾಯಿ ಮಂಚಿಕೇರಿ ಪ್ರಾಂಚೈಸಿಯ ರೈಲ್ವೆಸ್ ತಂಡ ದ್ವಿತೀಯ ಸ್ಥಾನ ಪಡೆದು ಆಕರ್ಷಕ ಟ್ರೋಫಿ ಮತ್ತು 15000 ಸಾವಿರ ರೂಪಾಯಿ ಹಣ ತನ್ನ ದಾಗಿಸಿಕೊಂಡಿತು. ತೃತೀಯ ಸ್ಥಾನವನ್ನು ಶ್ರೀ ನಾಗ ಸ್ವರ್ಣ ಯಕ್ಷಿ ಒಳ್ಳೇಸರ ಪ್ರಾಂಚಸಿಯ ಬರ್ಗಿ ಕುಮಟಾ ತಂಡ ಆಕರ್ಷಕ ಟ್ರೋಫಿ ಮತ್ತು 8000 ನಗದು ಬಹುಮಾನ ಪಡೆದರು. ಶ್ರೀ ಮಹಿಷಾಸುರ ಮರ್ದಿನಿ ಮಂಚಿಕೇರಿ ಪ್ರಾಂಚಸಿಯ ಆಳ್ವಾಸ್ ತಂಡ ಚತುರ್ಥ ಬಹುಮಾನ ಆಕರ್ಷಕ ಟ್ರೋಫಿ ಮತ್ತು 5000 ರೂಪಾಯಿ ನಗದು ಹಾಗೂ ಉತ್ತಮ ತಂಡ ಪ್ರಶಸ್ತಿಗೆ ಭಾಜನರಾದರು.
ಹಾಸಣಗಿ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಪಂದ್ಯಾವಳಿ ಉದ್ಘಾಟಿಸಿದರು. ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಕ್ರೀಡಾಂಗಣ ಉದ್ಘಾಟಿಸಿದರು.ಹಾಸಣಗಿ ಗ್ರಾ.ಪಂ. ಅಧ್ಯಕ್ಷೆ ಶವಿನೋದಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಎಂ.ಕೆ.ಭಟ್ಟ ಸ್ವಾಗತಿಸಿದರು. ಪ್ರಮುಖರಾದ ದಿಗ್ವಿ ಸತೀಶ ಶೆಟ್ಟಿ, ಸತೀಶ ಶಿವರಾಮ ಶೆಟ್ಟಿ ಭಾಗವಹಿಸಿದ್ದರು.