ಯಲ್ಲಾಪುರ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವೆ, ನಾಯಕತ್ವ ಗುಣವನ್ನು ರೂಢಿಸಿಕೊಳ್ಳಲು ಸಹಾಯಕಾರಿ ಎಂದು ವಜ್ರಳ್ಳಿ ಗ್ರಾ.ಪಂ ಅಧ್ಯಕ್ಷ ಭಗೀರಥ ನಾಯ್ಕ ಹೇಳಿದರು. ಅವರು ತಾಲೂಕಿನ ವಜ್ರಳ್ಳಿಯ ಗ್ರಾ.ಪಂ ಸಭಾಭವನದಲ್ಲಿ ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಒಂದು ಹಾಗೂ ಎರಡನೇ ಘಟಕಗಳ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲೆ ಸವಿತಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಸಂತೋಷಿ ಬಂಟ, ವಜ್ರಳ್ಳಿ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕಿ ರಾಧಾ ಭಟ್ಟ, ಸರ್ವೋದಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಸಿ ಗಾಂವ್ಕರ್, ಎಸ್.ಡಿ.ಎಮ್ ಸಿ ಅಧ್ಯಕ್ಷ ಕಾಮೇಶ್ವರ ಭಟ್ಟ, ಕಾರ್ಯಕ್ರಮಾಧಿಕಾರಿ ಸುರೇಖಾ ತಡವಲ, ಸಹ ಶಿಬಿರಾಧಿಕಾರಿ ನಿತೇಶ ಮೋರೆ, ನಾಯಕರಾದ ದಿನೇಶ ಗೌಡ, ನಾಗರಾಜ ಪಟಗಾರ, ನಾಯಕಿಯರಾದ ಗೀತಾ ಸಿದ್ದಿ, ಕೀರ್ತಿ ಮರಾಠಿ ಇತರರಿದ್ದರು.