ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಘಟಕದ ಅಡಿಯಲ್ಲಿ ಕ್ರಿಯಾ ಸಂಶೋಧನೆಯ ಕಾರ್ಯಾಗಾರ ಆಯೋಜಿಸಲಾಗಿತ್ತು.
ವಿಶೇಷ ಉಪನ್ಯಾಸಕರಾಗಿ ಹೊನ್ನಾವರದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸವಿತಾ ನಾಯ್ಕ ಮಾತನಾಡಿ, ಕ್ರಿಯಾ ಸಂಶೋಧನೆಯ ಉದ್ದೇಶಗಳು, ಹಂತಗಳು, ರಚನೆಗಳು, ಉಪಯೋಗ ಮತ್ತು ಕ್ರಿಯಾ ಸಂಶೋಧನೆಯನ್ನು ಶಿಕ್ಷಕರು ಯಾವಾಗ, ಯಾಕೆ ಮತ್ತು ಹೇಗೆ ಮಾಡಬೇಕೆಂಬುದರ ಕುರಿತು ಕಾರಣ ಹಾಗೂ ಉದಾಹರಣೆಗಳೊಂದಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪ್ರೀತಿ ಪಿ. ಭಂಡಾರಕರ, ಕ್ರಿಯಾ ಸಂಶೋಧನೆಯು ಶಾಲಾ ಶೈಕ್ಷಣಿಕ ಸಮಸ್ಯೆಗಳ ಪರಿಶೀಲನೆಯಲ್ಲಿ ಜ್ಞಾನವನ್ನು ಹೆಚ್ಚಿಸುತ್ತದೆ ಎಂಬುದನ್ನು ಪ್ರಸ್ತುತ ಪಡಿಸಿ ವೃತ್ತಿಪರ ಬೆಳವಣಿಗೆಗೆ ಕ್ರಿಯಾ ಸಂಶೋಧನೆಯ ಅಗತ್ಯತೆಯನ್ನು ವಿವರಿಸಿದರು. ಮಹಾವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ರೇಖಾ ಸಿ. ಯೆಲಿಗಾರ ಅತಿಥಿಗಳನ್ನು ಪರಿಚಯಿಸಿದರು. ನಾಗಶ್ರೀ ಸಂಗಡಿಗರು ಪ್ರಾರ್ಥಿಸಿದರು. ಅನ್ವಿತಾ ಸ್ವಾಗತಿಸಿದರೆ, ಪಾಮಣ್ಣ ವಂದಿಸಿದರು. ಮಾನಸಾ ಭಟ್ ನಿರೂಪಿಸಿದರು.