ಹೊನ್ನಾವರ: ತಾಲೂಕಿನ ಮಂಕಿ ಬಣಸಾಲೆಯ ಮೀನು ಮಾರ್ಕೆಟ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊರ್ವ ಓಸಿ,ಮಟಕಾ ಜೂಗಾರಾಟ ಆಡಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಆರೋಪಿತ ವ್ಯಕ್ತಿ ಕಾಸರಕೋಡ್ ದೇವಸ್ಥಾನಕೇರಿಯ ಈಶ್ವರ್ ಬಡ್ಕಾ ಗೌಡ, ಇನ್ನೊರ್ವ ಮಂಕಿ ಮುಲೆಕೇರಿಯ ಸಂತೋಷ ನಾಯ್ಕ ಎಂದು ಗುರುತಿಸಲಾಗಿದೆ. ದಾಳಿಯ ವೇಳೆ ಆರೋಪಿತರಿಂದ ಒಟ್ಟು 1200 ರೂಪಾಯಿ ನಗದು, ಓ.ಸಿ. ಮಟಕಾ ಸಂಖ್ಯೆಗಳನ್ನು ಬರೆದ ಚೀಟಿ 1, ಪೆನ್ 1 ಇವುಗಳೊಂದಿಗೆ ಸಿಕ್ಕಿದ್ದಾರೆ.ಆರೋಪಿತ ಸಂತೋಷ ನಾಯ್ಕ ಎಂಬಾತ ಈಶ್ವರ್ ಬಡ್ಕಾ ಗೌಡನಿಂದ ಹಣ ಮತ್ತು ಓ.ಸಿ ಚೀಟಿ ಪಡೆದುಕೊಳ್ಳುವವನಾಗಿದ್ದರಿಂದ ಆರೋಪಿತರಿಬ್ಬರ ಮೇಲು ಕಲಂ. 78 (3) ಕೆ.ಪಿ.ಆಕ್ಟ ನೇದರ ಅಡಿಯಲ್ಲಿ ಮಂಕಿ ಠಾಣೆಯಲ್ಲಿ ದೂರು ದಾಖಲಾಗಿದೆ.