ಹೊನ್ನಾವರ: ತಾಲೂಕಿನ ಭಾರತೀಯ ಜನತಾ ಪಾರ್ಟಿ ಹೊನ್ನಾವರ ಮಂಡಲದ ತಾಲೂಕ ಪದಾಧಿಕಾರಿಗಳನ್ನು ಮಂಡಲದ ಅಧ್ಯಕ್ಷರಾದ ಮಂಜುನಾಥ ನಾಯ್ಕ ನೇಮಕ ಮಾಡಿ ಅದೇಶ ಹೊರಡಿಸಿದ್ದಾರೆ.
ತಾಲೂಕ ಮಂಡಲದ ಉಪಾಧ್ಯಕ್ಷರಾಗಿ ಹೊನ್ನಾವರ ಪಟ್ಟಣದ ವಿಜಯ ವೆಂಕಟೇಶ್ ಕಾಮತ್, ಇಡಗುಂಜಿಯ ಕಮಲಾಕರ ನಾಯ್ಕ, ಕರ್ಕಿಯ ಶ್ರೀಕಾಂತ ಮೊಗೇರ್, ಕಾಸರಕೋಡ ಹನುಮಂತ ತಾಂಡೇಲ್, ಹಳದಿಪುರದ ರೇಣುಕಾ ಶರದ್ ಹಳದೀಪುರ, ಚಂದಾವರದ ಅಶ್ವಿನಿ ನಾಯ್ಕ, ಕಾರ್ಯದರ್ಶಿಯಾಗಿ ಮುಗ್ವಾದ ನಾರಾಯಣ ಮಹಾಬಲೇಶ್ವರ ಹೆಗಡೆ ಮಾವಿನಕುರ್ವದ ಹರಿಶ್ಚಂದ್ರ ನಾಯ್ಕ, ಚಿಕ್ಕನಕೋಡ ವಿಘ್ನೇಶ್ವರ ಹೆಗಡೆ, ಹಳದಿಪುರದ ಮಂಜು ಗೌಡ, ಹೊನ್ನಾವರದ ನಿಶಾ ಶೇಟ್, ಕುದ್ರಗಿಯ ಕಾಂಚನಾ ನಾಯ್ಕ, ಖಜಾಂಚಿಯಾಗಿ ಶ್ರೀಕಲಾ ಶಾಸ್ತ್ರಿ ಇವರನ್ನು ನೇಮಕ ಮಾಡಲಾಗಿದೆ.
ಇನ್ನುಳಿದ ವಿವಿಧ ಮೊರ್ಚಾ ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ನಿಯೋಜಿಸಿದ್ದು, ತಾಲೂಕ ಮಾಧ್ಯಮ ವಕ್ತಾರರಾಗಿ ರಮೇಶ ನಾಯ್ಕ ತುಂಬೊಳ್ಳಿ, ಮಹಿಳಾ ಮೊರ್ಚಾ ಅಧ್ಯಕ್ಷರಾಗಿ ಮೇಧಾ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಾಕ್ಷಿ ಗೌಡ, ಆಶಾ ನಾಯ್ಕ, ಹಿಂದುಳಿದ ವರ್ಗ ಮೊರ್ಚಾ ಅಧ್ಯಕ್ಷರಾಗಿ ಗೋವಿಂದ ಗೌಡ, ಪ್ರದಾನ ಕಾರ್ಯದರ್ಶಿಯಾಗಿ ಉಲ್ಲಾಸ ನಾಯ್ಕ, ಮಹೇಶ ನಾಯ್ಕ, ತಾಲೂಕ ಯುವಮೊರ್ಚಾ ಅಧ್ಯಕ್ಷರಾಗಿ ರಘು ಖಾರ್ವಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ನಾಯ್ಕ, ಸದಾನಂದ ಮರಾಠಿ, ರೈತಮೊರ್ಚಾ ಅಧ್ಯಕ್ಷರಾಗಿ ಗಜಾನನ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಗೌಡ, ಮಹಬಲೇಶ್ವರ ಮಡಿವಾಳ, ಎಸ್.ಸಿ ಮೊರ್ಚಾ ಅಧ್ಯಕ್ಷರಾಗಿ ಚಂದ್ರಹಾಸ ಹಳ್ಳೆರ್, ಪ್ರದಾನ ಕಾರ್ಯದರ್ಶಿಯಾಗಿ ಅಶೋಕ ಹಳ್ಳೇರ್, ರಾಮಕೃಷ್ಣ ಹಸ್ಲರ್ ಇವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಂಡಲದ ಅಧ್ಯಕ್ಷ ಮಂಜುನಾಥ ನಾಯ್ಕ ಮಾಹಿತಿ ನೀಡಿದ್ದಾರೆ.