Slide
Slide
Slide
previous arrow
next arrow

ಇಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

300x250 AD

ಭಟ್ಕಳ: ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬ್ಯಾಟರಿ ಸ್ಪೋಟಿಸಿ ಜೀವ ಹಾನಿಯು ಆಗಿದೆ. ಈಗ ಭಟ್ಕಳದಲ್ಲೂ ಇಂತಹ ಘಟನೆ ನಡೆದಿದೆ. ಮಂಗಳವಾರ ಪಟ್ಟಣದ ಅರ್ಬನ್ ಬ್ಯಾಂಕ್ ಎದುರಿನ ಖಾಸಗಿ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿಟ್ಟ ಎಲೆಕ್ಟ್ರಿಕ್ ಸ್ಕೂಟರ್ ಒಂದಕ್ಕೆ ಬೆಂಕಿ ತಗುಲಿದೆ.

ಮುಂಡಳ್ಳಿಯ ನಾಗರಾಜ ಮೊಗೇರ ಎನ್ನುವರಿಗೆ ಸೇರಿದ ಬೆನ್ಲಿಂಗ್ ಸಂಸ್ಥೆಯ ಸ್ಕೂಟರ್‌ಗೆ ಬೆಂಕಿ ತಗುಲಿದೆ. ನಿಲ್ಲಿಸಿಟ್ಟ ಸ್ಕೂಟರ್‌ಗೆ ಬೆಂಕಿ ತಗಲಿದ್ದರಿಂದ ಹೆಚ್ಚಿನ ಅವಘಡ ಸಂಭವಿಸಿಲ್ಲ. ಇವರು ಸ್ಕೂಟರ್ ಡಿಕ್ಕಿಯಲ್ಲಿದ್ದ ದಾಖಲೆಯನ್ನು ತೆಗೆಯಲು ತೆರಳಿದ್ದರು. ಆ ಸಂದರ್ಭದಲ್ಲಿ ಹೊಗೆಯಾಡುವದನ್ನು ನೋಡಿ ತಕ್ಷಣ ಪಕ್ಕದ ಅಂಗಡಿಯವರಿಂದ ನೀರು ತಂದು ಹಾಕಿದ್ದು, ಸ್ಥಳೀಯರು ಸಹಕರಿಸಿದ್ದಾರೆ. ಹರಸಾಹಸ ಪಟ್ಟು ಬೆಂಕಿಯನ್ನು ಒಂದು ಹಂತಕ್ಕೆ ನಿಯಂತ್ರಿಸಿದ್ದಾರೆ. ಬಳಿಕ ಅಗ್ನಿಶ್ಯಾಮಕ ದಳ ಆಗಮಿಸಿ, ಸ್ಕೂಟರನಲ್ಲಿದ್ದ ಬ್ಯಾಟರಿಯನ್ನು ತೆಗೆದು ರಾಸಾಯನಿಕ ಸಿಂಪಡಿಸಿ ಬೆಂಕಿಯನ್ನು ನಂದಿಸಿದ್ದಾರೆ. ನಿಲ್ಲಿಸಿಟ್ಟ ಸ್ಕೂಟರ್‌ಗೆ ಬೆಂಕಿ ತಗುಲಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಸ್ಕೂಟರ್ ಭಾಗಶಃ ಸುಟ್ಟು ಹೋಗಿದೆ.

300x250 AD

ಈ ನಡುವೆ ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಎಲೆಕ್ಟ್ರಿಕ್ ವಾಹನ ಗ್ರಾಹಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ದೇಶಾದ್ಯಂತ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೋಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ದೋಷ, ಕಳಪೆ ಗುಣಮಟ್ಟದಂತಹ ಸಮಸ್ಯೆಗಳಿಂದ ಬೆಂಕಿ ಅವಘಡಗಳಿಗೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರೆಗೆ ಮೂವರು ವ್ಯಕ್ತಿಗಳ ಸಾವಿಗೆ ಎಲೆಕ್ಟ್ರಿಕ್ ವಾಹನಗಳು ಕಾರಣವಾಗಿವೆ. ಈ ಬೆಂಕಿಗೆ ನಿಜವಾದ ಕಾರಣ ತಿಳಿದಿಲ್ಲವಾದರೂ, ತಾಪಮಾನವು ನಲವತ್ತರ ಗಡಿಯನ್ನು ತಲುಪುತ್ತಿರುವುದು ಕೂಡ ಈ ಅವಘಡಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಆಗಮಿಸಿ ಪರೀಶೀಲನೆ ನಡೆಸಿದರು.

Share This
300x250 AD
300x250 AD
300x250 AD
Back to top