Slide
Slide
Slide
previous arrow
next arrow

‘ಗ್ರಾಮೀಣ ಭಾಗದಲ್ಲಿ ಮತದಾನ ಜಾಗೃತಿ ಅತಿ ಅವಶ್ಯ’

300x250 AD

ಕಾರವಾರ: ನೆಹರು ಯುವ ಕೇಂದ್ರ ಕಾರವಾರ ದುರ್ಗಾ ಮಹಿಳಾ ಮಂಡಳ ದಿಬ್ಬಣಗಲ್ ಇವರ ಆಶ್ರಯದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಶ್ರೀ ವೀರ ವಿಠ್ಠಲ ಮುಖ್ಯ ಪ್ರಾಣ ದೇವರ ಅರ್ಚಕರಾದ ವರದರಾಜ ಭಟ್ಟ ಇವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮತದಾನದ ಜಾಗೃತಿ ಅತಿ ಅವಶ್ಯಕವಾಗಿದೆ. ಇಂತಹ ಕಾರ್ಯಕ್ರಮ ಆಯೋಜಿಸಿದ ಸಂಘದ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಜಲವಳ್ಳಿ ಗ್ರಾ.ಪಂ ಪಿ.ಡಿ.ಓ ಶ್ರೀಧರ ಪಟಗಾರ ಮಾತನಾಡಿ ಮತದಾನದ ಅರಿವು ನಿಮಗಿದ್ದರೆ ಅರಿವಿಲ್ಲದವರಿಗೆ ಮತದಾನದ ಅರಿವು ಮಾಡಿಸಿದರೆ ಈ ಗ್ರಾಮದಲ್ಲಿ ಮತದಾನದ ಜಾಗೃತಿ ಹೆಚ್ಚಾದಂತೆ ಎಂದರು. ಜನರು ಆಸೆ-ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಎಂದು ತಿಳಿಸಿ ಮತದಾನದ ನಿಯಮಗಳನ್ನು ವಿಸ್ತಾರವಾಗಿ ತಿಳಿಸಿದರು. ವೇದಿಕೆಯ ಮುಖ್ಯ ಅತಿಥಿಗಳಾದ ನಿವೃತ್ತ ಶಿಕ್ಷಕ ಸತ್ಯಪ್ಪ ನಾಯ್ಕ ಮಾತನಾಡಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತ ಚಲಾಯಿಸಿ. ಎಂದು ಹೇಳಿದರು. ವೇದಿಕೆಯಲ್ಲಿ ತಾಲೂಕ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ, ಖರ್ವಾ ಗ್ರಾ.ಪಂ ಕಾರ್ಯದರ್ಶಿನಾಗರಾಜ ಅಂಬಿಗ,ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದತ್ತಾತ್ರೇಯ ಮೇಸ್ತ ,ದುರ್ಗಾ ಮಹಿಳಾ ಮಂಡಳದ ಅಧ್ಯಕ್ಷರಾದ ನಂದಿತ ಭಟ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top