ಕಾರವಾರ: ಗೃಹರಕ್ಷಕ ದಳ 75ನೇ ವರ್ಷ ಪೂರೈಸಿದ ನೆನಪಿಗೋಸ್ಕರ ರಕ್ತದಾನ ಶಿಬಿರವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ಕೇಂದ್ರದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದರು.
ಉತ್ತರ ಕನ್ನಡ ಜಿಲ್ಲಾ ಹೋಂಗಾರ್ಡ್ ಸಮಾದೇಷ್ಟರಾದ ಡಾ. ಸಂಜು ನಾಯಕ ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರದ ಉದ್ಘಾಟನೆ ಮಾಡಿ, ಸಮಾಜದಲ್ಲಿ ನಾವು ಇತರರಿಗೆ ಮಾದರಿಯಾಗಿ ಬದುಕಬೇಕು, ಅಂದಾಗ ಮಾತ್ರ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದರು. ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕದಳದ ಕಾರವಾರ, ಮಲ್ಲಾಪುರ, ಅಂಕೋಲಾ ಮತ್ತು ಚೆಂಡಿಯಾ ಘಟಕದ ಗೃಹ ರಕ್ಷಕರು ಈ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಕೈಜೋಡಿಸಿದರು.
ಈ ಸಂಧರ್ಭದಲ್ಲಿ ಕಾರವಾರ ರಕ್ತ ನಿಧಿ ಕೇಂದ್ರದ ಡಾ. ರೂಪಾ ಅರಸ್, ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ಕಾರವಾರ ಗೃಹ ರಕ್ಷಕ ದಳದ ಘಟಕಾಧಿಕಾರಿ ಎಸ್.ಕೆ.ನಾಯ್ಕ್ ಮಾತನಾಡಿ, ತಮ್ಮ ಕಾರವಾರ ಘಟಕದ 75ನೇ ವರ್ಷದ ನೆನಪಿಗೋಸ್ಕರ ರಕ್ತದಾನ ಶಿಬಿರವನ್ನು ಸಮಾದೇಷ್ಟರು ಹಮ್ಮಿಕೊಂಡು ನಮ್ಮನ್ನೆಲ್ಲಾ ಹುರಿದುಂಬಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ರೋ. ಡಾ. ಸಮೀರ ನಾಯಕ, ರೋ.ಗುರುರಾಜ್ ಭಟ್ಟ ಕಾರ್ಯದರ್ಶಿ, ರೋ. ರಾಜೇಶ್ ಶೆಟ್ಟಿ, ರೋ ಗೋವಿಂದರಾವ್ ಮಾಂಜರೆಕರ, ರೋ. ದೀಪಕ ನಾಯ್ಕ್ ಮುಂತಾದ ಪ್ರಮುಖರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ರೋ.ಪ್ರಸನ್ನ ತೆಂಡೂಲ್ಕರ್. ರೋ.ಅಮರನಾಥ್ ಶೆಟ್ಟಿ, ಸೌಜನ್ಯ ಕಾಮತ ಮತ್ತು ನಿವೃತ್ತ ಪ್ರಾಂಶುಪಾಲ ಶಿವಾನಂದ್ ನಾಯಕ ಉಪಸ್ಥಿತರಿದ್ದರು.