ದಾಂಡೇಲಿ : ನಗರದ ಕಾರ್ಮಿಕ ಭವನದಲ್ಲಿ ನಡೆದ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ ಹಿರಿಯ ವೈದ್ಯರುಗಳಾದ ಡಾ.ಎಂ.ವಿ.ಕಾಮತ್, ಡಾ.ಎಸ್.ಎಲ್.ಕರ್ಕಿ, ಸಮಾಜ ಸೇವೆಯಲ್ಲಿ ಗಮನ ಸೆಳೆದಿರುವ ಫಿರೋಜ್ ಫಿರ್ಜಾದೆ, ಯಕ್ಷಗಾನ ರಂಗದಲ್ಲಿ ಅದ್ವಿತೀಯ ಕಂಠದ ಮೂಲಕ ಗಮನಸೆಳೆದ ಭಾಗವತರಾದ ವಿಷ್ಣುಮೂರ್ತಿ ರಾವ್, 28 ಬಾರಿ ರಕ್ತದಾನ ಮಾಡಿರುವ ಹಾಗೂ 13 ರಕ್ತದಾನ ಶಿಬಿರವನ್ನು ಸಂಘಟಿಸಿರುವ ಸುಧೀರ್ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಅನ್ನಪೂರ್ಣ ಪಾಠಣಕರ, ರೀಟಾ ದೇವದಿತ್ ಡಯಾಸ್, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನರೇಶ್ ನಾಯ್ಕ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಚೆಯಣ್ಣ ರಘುವೀರ್.ಎಸ್ಮಗೌಡ, ಸಗಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಂದ್ರು ಕೋಕಣಿ, ಭರತನಾಟ್ಯ ಕಲಾವಿದೆ ಅಮೃತಾ ನಾಯ್ಕ, ಕಳೆದ 40 ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಕಲಾಸೇವೆ ಮಾಡಿಕೊಂಡು ಬಂದಿರುವ ದೇವೇಂದ್ರ ನವಲೆ, ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಂದೀಪ್ ತೋರಸ್ಕರ್ ಹಾಗೂ ಪೌರಕಾರ್ಮಿಕರಾಗಿ ಅನುಪಮಾ ಸೇವೆಯನ್ನು ಸಲ್ಲಿಸುತ್ತಿರುವ ರಾಮಾಂಜನೇಯ ಅವರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶಂಕರ ಹಲಗತ್ತಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ, ಬಂಗೂರ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಆರ್.ಪಿ ನಾಯ್ಕ, ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಬುದ್ಧಿವಂತ ಗೌಡ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
.